ನವದೆಹಲಿ: ಕೋವಿಡ್ 19ರ ನೂತನ ರೂಪಾಂತರ ತಳಿ ಒಮಿಕ್ರಾನ್ ಜಗತ್ತಿನಾದ್ಯಂತ ಕ್ಷಿಪ್ರವಾಗಿ ಹರಡುತ್ತಿರುವುದು ಆರೋಗ್ಯ ತಜ್ಞರಲ್ಲಿ ಕಳವಳ ಮೂಡಿಸಿದ್ದು, ಈಗಾಗಲೇ ಅಮೆರಿಕ ಬ್ರಿಟನ್, ಇಸ್ರೇಲ್, ಹಾಂಗ್ ಕಾಂಗ್, ಜಪಾನ್, ಭಾರತ ಸೇರಿದಂತೆ ಜಗತ್ತಿನ 77 ದೇಶಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.
ಇದನ್ನೂ ಓದಿ:ಹಾವು-ಏಣಿ ಆಟ:ಷೇರುಪೇಟೆ ವಹಿವಾಟು-10 ನಿಮಿಷದಲ್ಲಿ 318 ಕೋಟಿ ರೂ. ಕಳೆದುಕೊಂಡ ಜುಂಜುನ್ ವಾಲಾ
ಒಂದು ವೇಳೆ ಬ್ರಿಟನ್ ನಲ್ಲಿ ಕ್ಷಿಪ್ರವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ರೀತಿ ಭಾರತದಲ್ಲಿಯೂ ಸಮುದಾಯಕ್ಕೆ ಹರಡಿದಲ್ಲಿ ಪ್ರತಿನಿತ್ಯ 14 ಲಕ್ಷ ಪ್ರಕರಣಗಳು ದೃಢಪಡುವ ಸಾಧ್ಯತೆ ಇದ್ದಿರುವುದಾಗಿ ನೀತಿ ಆಯೋಗದ ಡಾ.ವಿ.ಕೆ.ಪೌಲ್ ಎಚ್ಚರಿಸಿದ್ದಾರೆ.
ಯುರೋಪ್ ನಾದ್ಯಂತ ಹೊಸ ರೂಪಾಂತರ ತಳಿಯಿಂದಾಗಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಕ್ಷಿಪ್ರವಾಗಿ ಹೆಚ್ಚಳವಾಗುತ್ತಿದೆ. ಡೆಲ್ಟಾ ಹಾಗೂ ಒಮಿಕ್ರಾನ್ ಪ್ರಕರಣ ಪತ್ತೆಯಾಗುತ್ತಿರುವುದು ಈ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಮುಖ್ಯವಾಗಿ ಬಹುತೇಕ ದೇಶಗಳಲ್ಲಿ ಎರಡು ಕೋವಿಡ್ ಡೋಸ್ ಲಸಿಕೆ ನೀಡಲಾಗಿದ್ದರೂ ಕೂಡಾ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದೆ ಎಂದು ಡಾ.ಪೌಲ್ ತಿಳಿಸಿದ್ದಾರೆ.
ಯುನೈಟೆಡ್ ಕಿಂಗ್ ಡಮ್ ನಲ್ಲಿ ಶುಕ್ರವಾರ ಭಾರೀ ಸಂಖ್ಯೆಯಲ್ಲಿ ಪ್ರಕರಣ ಹೆಚ್ಚಳವಾಗಿತ್ತು. ಬ್ರಿಟನ್ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ನಿನ್ನೆ ಒಂದೇ ದಿನದಲ್ಲಿ 93,045 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಸತತ ಮೂರು ದಿನಗಳಿಂದ ಬ್ರಿಟನ್ ನಲ್ಲಿ ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅಂದರೆ ಭಾರತಕ್ಕೆ ಇದು ಯಾವ ಮುನ್ಸೂಚನೆ ನೀಡುತ್ತಿದೆ? ಎಂದು ಡಾ.ವಿ.ಕೆ.ಪೌಲ್ ಪ್ರಶ್ನಿಸಿದ್ದು, ಈ ಅಂಕಿಅಂಶ ಚಿಂತೆಗೀಡು ಮಾಡಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಬ್ರಿಟನ್ ನಲ್ಲಿ ಕೋವಿಡ್ ಸೋಂಕು ಹಬ್ಬಿದಂತೆ ಭಾರತದಲ್ಲಿಯೂ ಹೆಚ್ಚಳವಾದರೆ, ನಮ್ಮ ಜನಸಂಖ್ಯೆಯ ಆಧಾರದ ಮೇಲೆ ಪ್ರತಿದಿನ 14 ಲಕ್ಷ ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ ಎಂದು ಡಾ. ಪೌಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.