Advertisement

ಭಾರತಕ್ಕೆ 2020ರ ಡಿಸೆಂಬರ್ ನಲ್ಲಿ 10 ಕೋಟಿ ಡೋಸ್ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಲಭ್ಯ?

01:30 PM Nov 14, 2020 | Nagendra Trasi |

ನವದೆಹಲಿ: ಆಸ್ಟ್ರಾಜೆನೆಕಾ ಸಂಶೋಧನೆ ನಡೆಸುತ್ತಿರುವ ಕೋವಿಡ್ ಲಸಿಕೆ ಡಿಸೆಂಬರ್ (ಮುಂದಿನ) ತಿಂಗಳು ಭಾರತದಲ್ಲಿ ಲಭ್ಯ ವಾಗುವ ಸಾಧ್ಯತೆ ಇದೆ. 10 ಕೋಟಿ ಡೋಸ್‌ ಮೊದಲ ಹಂತದಲ್ಲಿ ವಿತರಿಸಲು ಸಾಧ್ಯವಾಗಲಿದೆ ಎಂದು ಪುಣೆಯ ಸೀರಂ ಇನ್ಸಿಟ್ಯೂಟ್‌ ಆಫ್ ಇಂಡಿಯಾದ ಮುಖ್ಯಸ್ಥ ಅಡಾರ್‌ ಪೂನಾವಾಲ ತಿಳಿಸಿದ್ದಾರೆ.

Advertisement

ಮುಂದಿನ ತಿಂಗಳೇ ದೇಶದ ವಿವಿಧ ಭಾಗಗಳಲ್ಲಿ ಅದನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ‌ಈ ಬಗ್ಗೆ ಕೇಂದ್ರ ಸರ್ಕಾರದಿಂದ ಡಿಸೆಂಬರ್‌ನಲ್ಲಿ ಅನುಮತಿ ದೊರಕುವ ಸಾಧ್ಯತೆಗಳಿವೆ ಎಂದು ಪೂನಾವಾಲ ತಿಳಿಸಿದ್ದಾರೆ.

ಆಸ್ಟ್ರಾಜೆನೆಕಾ ಲಸಿಕೆಯ ಅಂತಿಮ ಹಂತದ ಪ್ರಯೋಗದಲ್ಲಿ ಇದು ಕೋವಿಡ್ ಸೋಂಕಿಗೆ ಪರಿಣಾಮಕಾರಿ ರಕ್ಷಣೆ ಒದಗಿಸುತ್ತದೆ ಎಂಬುದು ಪತ್ತೆಯಾಗಿರುವುದಾಗಿ ವಿವರಿಸಿದೆ.

ಇದನ್ನೂ ಓದಿ:ದೇಶದ ಹಿತಾಸಕ್ತಿ ವಿಚಾರದಲ್ಲಿ ಭಾರತ ರಾಜೀಯಾಗುವುದಿಲ್ಲ ಎಂಬ ಸತ್ಯ ಜಗತ್ತಿಗೆ ತಿಳಿದಿದೆ: ಮೋದಿ

ಐದು ಸಂಶೋಧಕ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿರುವ ಸೀರಂ ಎರಡು ತಿಂಗಳ ಅವಧಿಯಲ್ಲಿ 4 ಕೋಟಿ ಡೋಸ್‌ ಲಸಿಕೆಗಳನ್ನು ಸಿದ್ಧಪಡಿಸಿದೆ.

Advertisement

ಸಕ್ರಿಯ ಪ್ರಕರಣಗಳ ಇಳಿಕೆ: ದೇಶದಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ ಸತತ ಮೂರನೇ ದಿನ ಐದು ಲಕ್ಷಕ್ಕಿಂತ ಕೆಳಗೆಯೇ ಇದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 4,84, 547 ಸಕ್ರಿಯ ಕೇಸುಗಳಿವೆ. ಅಂದರೆ ಒಟ್ಟು ಸೋಂಕು ಪ್ರಕರಣಗಳ ಶೇ.5.55 ಆಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿನಿಂದ ಚೇತರಿಕೆ ಕಾಣುವುದರಿಂದ ಈ ಸಾಧನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next