Advertisement

India-Maldives ಸ್ನೇಹ ವೃದ್ಧಿಗೆ ಸಹಮತ: ವಿಪಕ್ಷಗಳ ಬೆಂಬಲ

01:03 AM Aug 12, 2024 | Team Udayavani |

ಮಾಲೆ: ಭಾರತದೊಂದಿಗೆ ಮಾಲ್ದೀವ್ಸ್‌ನ ಸ್ನೇಹ ಸಂಬಂಧವನ್ನು ಪುನಃಸ್ಥಾಪಿಸಲು ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಮುಂದಾಗಿರುವಂತೆಯೇ ಮುಯಿಜ್ಜು ನಿರ್ಣಯಕ್ಕೆ ಅಲ್ಲಿನ ವಿಪಕ್ಷಗಳೂ ಸಮ್ಮತಿಸಿವೆ.

Advertisement

ಮಾಲ್ದೀವ್ಸ್‌ಗೆ ಯಾವುದೇ ಸಂಕಟ ಎದುರಾದರೂ ಮೊದಲಿಗೆ ಸ್ಪಂದಿಸುವ ರಾಷ್ಟ್ರವೇ ಭಾರತ. ಹಾಗಾಗಿ ಅದರ ಜತೆಗಿನ ಸಂಬಂಧ ಸುಧಾರ ಣೆಗೆ ಮುಯಿಜ್ಜು ಕೈಗೊಳ್ಳುವ ಕ್ರಮಗಳಿಗೆ ನಮ್ಮ ಬೆಂಬಲವಿದೆ ಎಂದು ವಿಪಕ್ಷವಾದ ಡೆಮಾಕ್ರಟಿಕ್‌ ಪಾರ್ಟಿ ಅಧ್ಯಕ್ಷ ಅಬ್ದುಲ್ಲಾ ಶಾಹೀದ್‌ ಹೇಳಿದ್ದಾರೆ.

ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಾಲ್ದೀವ್ಸ್‌ ಪ್ರವಾಸದಲ್ಲಿದ್ದು, ಉಭಯ ದೇಶಗಳ ಸ್ನೇಹ ಸಂಬಂಧ ವೃದ್ಧಿಸುವ ಕುರಿತು ಇಬ್ಬರೂ ನಾಯಕರು ಹಲವು ನಿರ್ಣಯ ಘೋಷಿಸಿದ ಬೆನ್ನಲ್ಲೇ ಶಾಹೀದ್‌ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next