ಮೌಂಟ್ ಮೌಂಗನಿ: ಆತಿಥೇಯ ಕಿವೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯವನ್ನೂ ಸೋತ ಭಾರತ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಗುರಿಯಾಗಿದೆ. ಇದರೊಂದಿಗೆ ಸುಮಾರು 30 ವರ್ಷಗಳ ಬಳಿಕ ಭಾರತ ಏಕದಿನ ಕ್ಲೀನ್ ಸ್ವೀಪ್ ಅವಮಾನಕ್ಕೆ ಒಳಗಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿ ಭಾರತ ಏಳು ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದರೆ, ಮೊತ್ತ ಬೆನ್ನತ್ತಿದ ಕಿವೀಸ್ 47 ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.
ಇಲ್ಲಿನ ಬೆ ಓವಲ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಮತ್ತೆ ಆರಂಭಿಕ ಆಘಾತ ಎದುರಾಗಿತ್ತು. ಹೊಸ ಆರಂಭಿಕ ಜೊಡಿ ಮತ್ತೆ ವಿಫಲವಾಯಿತು. ವಿರಾಟ್ ಕೊಹ್ಲಿಯೂ 9 ರನ್ ಗೆ ಔಟಾದರು. 62 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತವನ್ನು ಆಧರಿಸಿದ್ದು ರಾಹುಲ್ ಮತ್ತು ಅಯ್ಯರ್.
ಅಯ್ಯರ್ 62 ರನ್ ಗಳಿಸಿದರೆ, ಕೆ ಎಲ್ ರಾಹುಲ್ 112 ಗಳಿಸಿದರು. ಕೊನೆಯದಾಗಿ ಮನೀಶ್ ಪಾಂಡೆ 42 ರನ್ ಗಳಸಿದರು. ಕಿವೀಸ್ ಪರ ಹ್ಯಾಮಿಶ್ ಬೆನೆಟ್ ನಾಲ್ಕು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಕಿವೀಸ್ ಗೆ ಗಪ್ಟಿಲ್ ಮತ್ತು ಹೆನ್ರಿ ನಿಕೋಲ್ಸ್ ಉತ್ತಮ ಆರಂಭ ನೀಡಿದರು. ಗಪ್ಟಿಲ್ 66 ರನ್ ಗಳಸಿದರೆ, ಹೆನ್ರಿ ನಿಕೋಲ್ಸ್ 80 ರನ್ ಗಳಿಸಿದರು. ವಿಲಿಯಮ್ಸನ್ 22 ಮತ್ತು ರಾಸ್ ಟೇಲರ್ 12 ರನ್ ಗಳಿಸಿ ವಿಫಲವಾದರು.
ಅಂತಿಮವಾಗಿ ಕಾಲಿನ್ ಡಿ ಗ್ರಾಂಡ್ ಹೋಮ್ ಬಿರುಸಿನ ಹೊಡೆತಗಳಿಂದ ರಂಜಿಸಿದರು. ಕಾಲಿನ್ ಅಜೇಯ 58 ರನ್ ಗಳಸಿದರು. ಭಾರತದ ಪರ ವಾಹಲ್ ಮೂರು ವಿಕೆಟ್ ಪಡೆದು ಮಿಂಚಿದರು. ಶಾರ್ದೂಲ್ ಠಾಕೂರ್ 9.1 ಓವರ್ ನಲ್ಲಿ 87 ರನ್ ನೀಡಿ ದುಬಾರಿಯಾದರು.