Advertisement

ಅಲ್ಪ ಇಳಿಕೆ…ಭಾರತದಲ್ಲಿ 24ಗಂಟೆಯಲ್ಲಿ 2,483 ಕೋವಿಡ್ ಪ್ರಕರಣ ಪತ್ತೆ, ಸಾವಿನ ಪ್ರಮಾಣ ಏರಿಕೆ

12:22 PM Apr 26, 2022 | Team Udayavani |

ನವದೆಹಲಿ: ಭಾರತದಲ್ಲಿ ನಾಲ್ಕನೇ ಅಲೆಯ ಭೀತಿಯ ನಡುವೆಯೇ ಕಳೆದ 24ಗಂಟೆಯಲ್ಲಿ ಕೋವಿಡ್ 19 ಸೋಂಕು ಪ್ರಕರಣ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2,483 ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಏಪ್ರಿಲ್ 26) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ವರ್ಗಾವಣೆ? ದುಬಾರಿಯಾಯ್ತೆ ಒಂದು ಟ್ವೀಟ್!

ಸೋಮವಾರ ದೇಶದಲ್ಲಿ 2,541 ಕೋವಿಡ್ ಪ್ರಕರಣ ವರದಿಯಾಗಿತ್ತು. ಭಾರತದಲ್ಲಿ ಈವರೆಗೆ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 43,06,02,569ಕ್ಕೆ ಏರಿಕೆಯಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 15,636ಕ್ಕೆ ಹೆಚ್ಚಳವಾಗಿದೆ. ಒಂದೇ ದಿನದಲ್ಲಿ 1,399 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.

24ಗಂಟೆ ಅವಧಿಯಲ್ಲಿ 1,970 ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಕೋವಿಡ್ 19 ಸೋಂಕಿನಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 4,25,23,311ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.75ರಷ್ಟಿದೆ.

ಕೇಂದ್ರ ಸಚಿವಾಲಯದ ಅಂಕಿಅಂಶದ ಪ್ರಕಾರ, 83.54 ಕೋಟಿ ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ. ಅಲ್ಲದೇ ಒಂದೇ ದಿನದಲ್ಲಿ 4.49 ಲಕ್ಷ ಪರೀಕ್ಷೆ ನಡೆಸಲಾಗಿದೆ ಎಂದು ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next