Advertisement

ಪಾಕಿಸ್ತಾನ, ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವಲ್ಲ

09:26 AM Jan 23, 2020 | Team Udayavani |

ನವದೆಹಲಿ: ಪಾಕಿಸ್ತಾನ ಅಥವಾ ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ನವದೆಹಲಿಯಲ್ಲಿ ಬುಧವಾರ ಎನ್‌ಸಿಸಿ ಗಣರಾಜ್ಯ ದಿನ ಶಿಬಿರದಲ್ಲಿ ರಕ್ಷಾಮಂತ್ರಿ ಪದಕ ವಿತರಿಸಿ ಅವರು ಮಾತನಾಡಿದರು.

Advertisement

ಭಾರತದ ಸಂತರು ತನ್ನ ನೆಲದ ಪ್ರಜೆಗಳನ್ನು ಮಾತ್ರ ತನ್ನವರೆಂದು ಹೇಳಲಿಲ್ಲ. ಬದಲಿಗೆ ಇಡೀ ವಿಶ್ವವನ್ನೇ ತನ್ನವರೆಂದು ಹೇಳಿದರು. ಆ ಸಂತರ ಮೌಲ್ಯಗಳಿಂದಲೇ ಭಾರತದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡಲು ಸಾಧ್ಯವಾಗಿದೆ. ಹೀಗಾಗಿಯೇ ಪಾಕಿಸ್ತಾನ, ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವೆಂದು ಘೋಷಿಸಿಕೊಳ್ಳಲಿಲ್ಲ ಎಂದಿದ್ದಾರೆ.

ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿ, ಮುಸ್ಲಿಮರನ್ನು ಪ್ರತ್ಯೇಕವಾಗಿ ನೋಡುತ್ತಿದೆ ಎಂದು ದೇಶಾದ್ಯಂತ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜನಾಥ್‌ ಹೇಳಿಕೆ ಮಹತ್ವ ಪಡೆದಿದೆ.

ನಾವು ಯಾವ ಧರ್ಮೀಯರನ್ನೂ ತರತಮ ಭಾವದಿಂದ ನಡೆಸಿಕೊಳ್ಳುವುದಿಲ್ಲ. ನಮ್ಮದು ಹಿಂದು, ಬೌದ್ಧ, ಸಿಖ್‌ ಧರ್ಮಾಧಾರಿತ ರಾಷ್ಟ್ರವೆಂದು ನಾವು ಹೇಳಲಿಲ್ಲ. ಇದು ಎಲ್ಲ ಧರ್ಮೀಯರಿಗೆ ಸೇರಿದ ದೇಶ. ಅದೇ ಪಾಕಿಸ್ತಾನ ನಮ್ಮದು ಧರ್ಮಾಧಾರಿತ ಎಂದು ಘೋಷಿಸಿಕೊಂಡಿದೆ. ಅಮೆರಿಕ ಕೂಡ ಧರ್ಮಾಧಾರಿತ ದೇಶವಾಗಿದೆ ಎಂದು ರಾಜನಾಥ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next