Advertisement
ಇಂಡಿಯನ್ ಸ್ಟ್ಯಾಂಡರ್ಡ್ಸ್ ಮಂಡಳಿ (ಬಿ.ಐ.ಎಸ್.) 2018ರಲ್ಲಿ ಸಿದ್ಧಪಡಿಸಿ ಸೂಚಿಸಿದ್ದ ಮಾನದಂಡಗಳಿಗೆ ಅನುಗುಣವಾಗಿ ಈ ಜಾಕೆಟ್ ಗಳನ್ನು ತಯಾರಿಸಲಾಗಿದೆ. ನೀತಿ ಆಯೋಗ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶನಗಳಿಗೆ ಅನುಸಾರವಾಗಿ ಬಿ.ಐ.ಎಸ್. ಈ ಮಾನದಂಡಗಳನ್ನು ಸಿದ್ಧಗೊಳಿಸಿತ್ತು.
ಈ ಜಾಕೆಟ್ ಗಳು ಅಪಾಯದ ತೀವ್ರತೆಯನ್ನು ಅವಲಂಬಿಸಿ 5 ರಿಂದ 10 ಕಿಲೋ ಗ್ರಾಂ ತೂಕದಲ್ಲಿ ತಯಾರಾಗಿದೆ ಮತ್ತಿದು ವಿಶ್ವದಲ್ಲೇ ಉತ್ತಮ ಗುಣಮಟ್ಟವನ್ನೂ ಸಹ ಹೊಂದಿದೆ. ಇನ್ನು ಈ ಜಾಕೆಟ್ ಗಳ ಬೆಲೆ 70,000 ದಿಂದ 80,000 ರೂಪಾಯಿಗಳವರೆಗೆ ಇರಲಿದ್ದು, ಇದು ಈ ಹಿಂದೆ ತರಿಸಿಕೊಳ್ಳುತ್ತಿದ್ದ ಜಾಕೆಟ್ ಗಳ ಬೆಲೆಗಳಿಗಿಂತ ಅಗ್ಗವಾಗಲಿದೆ. ನಮ್ಮಲ್ಲೇ ತಯಾರಿಸಲಾಗುವ ಈ ಜಾಕೆಟ್ ಗಳನ್ನು ಈಗಾಗಲೇ ಇತರೇ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯನ್ನೂ ಸಹ ಕೇಂದ್ರ ಸರಕಾರ ಹೊಂದಿದೆ.
Related Articles
Advertisement
– ಈ ಜಾಕೆಟ್ ಡೈನಾಮಿಕ್ ತೂಕ ವಿತರಣಾ ವ್ಯವಸ್ಥೆಯನ್ನು ಹೊಂದಿರುವುದರಿಂದ ಈ ಜಾಕೆಟ್ ತೊಟ್ಟುಕೊಳ್ಳುವವರಿಗೆ ಇದರ ನಿಜವಾದ ತೂಕದ ಅರ್ಧ ಭಾರ ಮಾತ್ರ ಅನುಭವಕ್ಕೆ ಬರುತ್ತದೆ.
– ಇನ್ನು ಈ ಜಾಕೆಟ್ ತೊಟ್ಟುಕೊಳ್ಳಲು ಹಾಗೂ ತೆಗೆಯಲು ಸುಲಭ ಸಾಧ್ಯ ರೂಪದಲ್ಲಿದ್ದು ಇದರಿಂದ ಈ ಜಾಕೆಟ್ ಬಳಸುವವರಿಗೆ ಇದನ್ನು ಬೇಕೆಂದಾಗ ಥಟ್ಟನೆ ತೊಟ್ಟುಕೊಳ್ಳಲು ಹಾಗೂ ಬೇಡವೆಂದಾಗ ಸುಲಭವಾಗಿ ತೆಗೆಯಲು ಅನುಕೂಲವಾಗುತ್ತದೆ.
– ಬುಲೆಟ್ ಗಳಿಂದ 360 ಡಿಗ್ರಿ ಕೋನದಲ್ಲಿ ರಕ್ಷಣೆ ಒದಗಿಸುವ ವ್ಯವಸ್ಥೆಯನ್ನು ಇದು ಹೊಂದಿರುವುದರಿಂದ ಸೈನಿಕರಿಗೆ ತಮ್ಮ ಆಯುಧಗಳನ್ನು ಸುಲಭವಾಗಿ ಬಳಸಲು ಈ ಜಾಕೆಟ್ ಸಹಕಾರಿಯಾಗಿದೆ.
ಸಿ.ಆರ್.ಪಿ.ಎಫ್., ಬಿ.ಎಸ್.ಎಫ್., ಎಸ್.ಎಸ್.ಬಿ., ಸಿ.ಐ.ಎಸ್.ಎಫ್., ಎನ್.ಎಸ್.ಜಿ. ಸೇರಿದಂತೆ ಕೇಂದ್ರೀಯ ಸಶಸ್ತ್ರ ಪಡೆಗಳು ಈಗಾಗಲೇ ಈ ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ.