Advertisement
ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತದ ಬಿಲ್ಗಾರರು ಚೀನವನ್ನು ಎದುರಿಸಲಿದ್ದು, ಈ ಕೂಟದ ಇತಿಹಾಸಲ್ಲಿ ಮೊದಲ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ದಿನದ ಇನ್ನೊಂದು ಸೆಮಿಫೈನಲ್‌ನಲ್ಲಿ ಚೀನ 6-2 ಅಂತರದಿಂದ ಅಗ್ರ ಶ್ರೇಯಾಂಕದ ಕೊರಿಯಾವನ್ನು ಮಣಿಸಿತು.
ಕೂಟದ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ 2020ರ ಟೋಕಿಯೊ ಒಲಿಂಪಿಕ್ ಅರ್ಹತೆ ಸಂಪಾದಿಸಿದ ಒಂದೇ ದಿನದಲ್ಲಿ 3 ಸದಸ್ಯರ ಭಾರತ ತಂಡ ಚಿನ್ನಕ್ಕೆ ಹತ್ತಿರವಾಗಿದೆ. ತರುಣ್‌ದೀಪ್ ರಾಯ್, ಅತನು ದಾಸ್ ಮತ್ತು ಪ್ರವೀಣ್ ಜಾಧವ್ ರೋಚಕ ಶೂಟೌಟ್‌ನಲ್ಲಿ 29-28ರಿಂದ ಮೇಲುಗೈ ಸಾಧಿಸಿದರು. ಅಂತಿಮ ಗೆಲುವಿನ ಅಂತರ 5-4. ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 6-0 ಅಂತರದಿಂದ ಚೈನೀಸ್ ತೈಪೆಗೆ ಆಘಾತವಿಕ್ಕಿತ್ತು. ಭಾರತದ ಪುರುಷರ ರಿಕರ್ವ್ ತಂಡ ಈ ಕೂಟದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದು ಇದು ಎರಡನೇ ಸಲ. 2005ರ ಮ್ಯಾಡ್ರಿಡ್ ಕೂಟದಲ್ಲಿ ಮೊದಲ ಸಲ ಈ ಸಾಧನೆ ಮಾಡಿತ್ತು. ಅಂದಿನ ತರುಣ್‌ದೀಪ್ ರಾಯ್, ಜಯಂತ್ ತಾಲೂಕಾªರ್ ಮತ್ತು ಗೌತಮ್ ಸಿಂಗ್ ಅವರನ್ನೊಳಗೊಂಡ ತಂಡ ಕೊರಿಯಾ ವಿರುದ್ಧ 232-244 ಅಂತರದಿಂದ ಸೋತು ಬೆಳ್ಳಿಗೆ ಸಮಾಧಾನಪಟ್ಟಿತ್ತು. ಭಾರತವ ವನಿತೆಯರ ಕಂಪೌಂಡ್ ತಂಡ ಕೂಡ ಪದಕದ ರೇಸ್‌ನಲ್ಲಿದೆ. ಕಂಚಿನ ಪದಕದ ಪ್ಲೇ-ಆಫ್ ಸ್ಪರ್ಧೆಯಲ್ಲಿ ಟರ್ಕಿಯನ್ನು ಎದುರಿಸಲಿದೆ.