Advertisement

ಭದ್ರತೆಗೆ ಹೆಚ್ಚಿನ ಗಮನ ಅನಿವಾರ್ಯ

11:37 PM Feb 03, 2022 | Team Udayavani |

ಹೊಸದಿಲ್ಲಿ: ಎರಡು ನೆರೆಯ  ರಾಷ್ಟ್ರಗಳು ಅಣ್ವಸ್ತ್ರಗಳನ್ನು ಹೊಂದಿರುವುದರಿಂದ ದೇಶಕ್ಕೆ ಹೆಚ್ಚಿನ ರೀತಿಯಲ್ಲಿ ಭದ್ರತೆಯತ್ತ ಗಮನ ಹರಿಸುವುದು ಅನಿ ವಾರ್ಯವೇ ಆಗಲಿದೆ ಎಂದು ಭೂಸೇನಾ ಮುಖ್ಯಸ್ಥ ಜ| ಎಂ.ಎಂ.ನರವಾಣೆ ಹೇಳಿದ್ದಾರೆ.

Advertisement

ಭದ್ರತ ವಿಚಾರಗಳಿಗೆ ಹೊಸದಿಲ್ಲಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಯುದ್ಧ ಎನ್ನುವ ಪರಿಕಲ್ಪನೆ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಭಾರತಕ್ಕೆ ಮುನ್ಸೂಚನೆಗಳು ಲಭಿಸ ಲಾರಂಭಿಸಿವೆ. ಅದರಿಂದ ಯಾವ ರೀತಿಯ ಹಾನಿ ಉಂಟಾಗಲಿದೆ ಎಂಬ ಬಗ್ಗೆ ಕೂಡ ಯೋಚಿಸುವ ಸ್ಥಿತಿಯಲ್ಲಿದೆ ಎಂದು ಪರೋ ಕ್ಷವಾಗಿ ಪಾಕಿಸ್ಥಾನ ಮತ್ತು ಚೀನಗಳಿಂದ ಎದುರಾಗಲಿರುವ ಭದ್ರತ ಸವಾಲುಗಳ ಬಗ್ಗೆ ಉಲ್ಲೇಖೀಸಿದ್ದಾರೆ.

ದೇಶದ ಉತ್ತರ ಭಾಗದಲ್ಲಿ ವಿಶೇಷವಾಗಿರುವ ಮತ್ತು ಬಹುಸ್ತರದ ಭದ್ರತಾ ಸವಾಲು ಗಳ ಅರಿವು ನಮಗೆ ಉಂಟಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉಂಟಾ ಗುವ ಹೊಸ ರೀತಿಯ ರಕ್ಷಣ ಸವಾಲು ಗಳನ್ನು ಎದುರಿಸಲು ನಮಗೆ ಸಾಧ್ಯ ವಾಗಲಿದೆ ಎಂದು ಜ| ನರವಾಣೆ ಹೇಳಿದ್ದಾರೆ.

ಸೇನೆಯ ಮೂರು ವಿಭಾಗಗಳ ಪೈಕಿ, ಭೂಸೇನೆ ವಿಶೇಷವಾಗಿ ತನ್ನಲ್ಲಿ ಇರುವ ಸಿಬಂದಿ ಮತ್ತು ಅಧಿಕಾರಿಗಳಿಗೆ ಹೊಸ ರೀತಿಯ ಕೌಶಲ ಅಭಿವೃದ್ಧಿಪಡಿಸುವಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬದಲಾವಣೆ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಜ| ನರವಾಣೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next