ಕೋಟ: ಓಂಕಾರದ ಸತ್ವ ತಿಳಿಸಿದ ದೇಶ ಭಾರತ. ಇಲ್ಲಿ ಯಾವುದೇ ಜಾತಿ ಮತ ಧರ್ಮಗಳ ಬೇದವಿಲ್ಲ. ದೇಶವನ್ನು ದೇವತೆ ರೀತಿಯಲ್ಲಿ ಪೂಜಿಸುವ ನಾವುಗಳು ಇಲ್ಲಿ ಹುಟ್ಟಿದಕ್ಕೆ ಧನ್ಯರು ಎಂದು ಶೃಂಗೇರಿ ಗೌರಿಗದ್ದೆ ದತ್ತಾತ್ರೇಯಪೀಠದ ಶ್ರೀ ವಿನಯ್ ಗುರೂಜಿ ಹೇಳಿದರು.
ಅವರು ಮೇ 18ರಂದು ಕೋಟದ ವಿವೇಕ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಂಯೋಜನೆಯಲ್ಲಿ ಜರಗಿದ ನಮ್ಮ ಭಾರತ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸತ್ಯದ ದಾರಿಯಿಂದ ಪರಿಶುದ್ಧ ವಾಗಬೇಕು. ನೆಲ ಜಲ, ಪರಿಸರ ಸಂರಕ್ಷಣೆಯಿಂದ ಬದುಕುವ ಜೀವನಾಡಿಯನ್ನು ಬೆಳೆಸಿಕೊಳ್ಳಬೇಕು. ಗಿಡಮರಗಳನ್ನು ಬೆಳೆಸಬೇಕು,ಸ್ವಚ್ಚತೆ ಕಾಪಾಡಬೇಕು ಎಂದರು.
ಸಾಮಾಜಿಕ ಚಿಂತಕ ಸಂತೋಷ್ ಜೀ ಮಾತನಾಡಿ, ಭಾರತ ದೇಶವನ್ನು ವಿಶ್ವದ ಇತರ ರಾಷ್ಟ್ರಗಳು ಕುತೂಹಲದಿಂದ ನೋಡಿತ್ತಿದೆ. ಇಲ್ಲಿನ ಆಚಾರ ವಿಚಾರಧಾರೆ,ಸಂಸ್ಕೃತಿ. ಸಂಪನ್ಮೂಲಗಳನ್ನು ಅಳೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭ ವಿನಯ್ ಗುರೂಜಿ ಮತ್ತು ಬಿ.ಎಲ್ ಸಂತೋಷ್ ಜೀ ಅವರನ್ನು ಕಾರ್ಯಕ್ರಮ ಸಂಯೋಜಕ ಕೋಟ ಶ್ರೀನಿವಾಸ ಪೂಜಾರಿಯವರು ಗೌರವಿಸಿದರು.
ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ವಂದಿಸಿದರು.