Advertisement

ಐದನೇ ಅತಿ ದೊಡ್ಡ ಆರ್ಥಿಕತೆಯತ್ತ ಭಾರತ

12:30 AM Jan 26, 2019 | Team Udayavani |

ನವದೆಹಲಿ: ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗುವತ್ತ ಭಾರತ ದಾಪುಗಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ಅನುಕೂಲಕರ ವಾತಾವರಣ ಕಲ್ಪಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

Advertisement

ಭಾರತ-ಏಷ್ಯಾ ಉದ್ಯಮಿಗಳ ಸಮ್ಮೇಳನದಲ್ಲಿ ಮಾತನಾ ಡಿದ ಅವರು, ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವ ಭಾರತವನ್ನು ಹೊಸ ಪೀಳಿಗೆಯ ನವ ಭಾರತವನ್ನಾಗಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಭಾರತ ಶ್ರಮಿಸುತ್ತಿದೆ ಎಂದರು. 184 ಲಕ್ಷ ಕೋಟಿ ರೂ.ಗಳ ಆರ್ಥಿಕತೆ ಹೊಂದುವ ಮೂಲಕ ಅಮೆರಿಕ, ಚೀನಾ, ಜಪಾನ್‌, ಜರ್ಮನಿ ಹಾಗೂ ಯುಕೆ ನಂತರದ 6ನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಭಾರತ, “ಮೇಕ್‌ ಇನ್‌ ಇಂಡಿಯಾ’, “ಡಿಜಿಟಲ್‌ ಇಂಡಿಯಾ’ದಂಥ ಯೋಜನೆಗಳ ಮೂಲಕ 5ನೇ ಅತಿ ದೊಡ್ಡ ಆರ್ಥಿಕತೆಯಾಗುವತ್ತ ಹೆಜ್ಜೆ ಹಾಕುತ್ತಿದೆ. ಜತೆಗೆ, ಉದ್ಯಮ ಸ್ಥಾಪನೆಗೆ ಸರಳ ಆಡಳಿತ ವ್ಯವಸ್ಥೆಯಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನಕ್ಕೇರಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next