Advertisement
ಶ್ರೀಲಂಕಾವಲಸೆ ಅಲೆ: 1960, 1983, 2009, 2022
1,70,000-ಭಾರತದಲ್ಲಿರುವ ನಿರಾಶ್ರಿತರು (ಸುಮಾರು)
ಹಸಿವು ಮನುಷ್ಯನ ಅತೀ ದೊಡ್ಡ ಶತ್ರು. ದಿವಾಳಿಯ ಕಾವಲಿ ಮೇಲೆ ಕೂತಿರುವ ಶ್ರೀಲಂಕಾದಲ್ಲಿ ಜನ ತುತ್ತು ಅನ್ನಕ್ಕೂ ಪರದಾಡುತ್ತಿದ್ದು, ಹಲವರು ನೆಮ್ಮದಿಯ ಬದುಕು ಕಾಣಲು ಭಾರತದತ್ತ ವಲಸೆ ಆರಂಭಿಸಿದ್ದಾರೆ. 30 ಸಾವಿರದಿಂದ 50 ಸಾವಿರ ರೂ.ಗಳವರೆಗೆ ದೋಣಿಯ ಟಿಕೆಟ್ ನೀಡಿ, ಭಾರತದ ರಾಮೇಶ್ವರ, ಧನುಷೊRàಟಿ ತೀರಗಳಿಗೆ ಬಂದಿಳಿಯುತ್ತಿದ್ದಾರೆ.
Advertisement
ಪಾಕಿಸ್ಥಾನವಲಸೆ ಅಲೆ: 1947
1.5 ಕೋಟಿ ಮಂದಿ ಆಶ್ರಯ ಪಡೆದವರು
ಬ್ರಿಟಿಷರ ಸಂಚು, ಕೆಲವು ರಾಜಕೀಯ ನಾಯಕರ ತಪ್ಪು ನಿರ್ಧಾರದ ಫಲವಾಗಿ ಭಾರತ 1947ರಲ್ಲಿ ವಿಭಜನೆಗೊಂಡು, ಪೂರ್ವ ಪಾಕಿಸ್ಥಾನ (ಬಾಂಗ್ಲಾ) ಮತ್ತು ಪಶ್ಚಿಮ ಪಾಕಿಸ್ಥಾನ ಉದಯಿಸಿದ್ದು ಜಗಜ್ಜಾಹೀರು. ಸ್ವಾತಂತ್ರ್ಯದ ಹೊಸ್ತಿಲಿನಲ್ಲಿ ನಡೆದ ದೇಶ ವಿಭಜನೆಯಿಂದಾ ಗಿ, ಭಾರತ ಬೃಹತ್ ಪ್ರಮಾಣದ ನಿರಾಶ್ರಿತರಿಗೆ ನೆಲೆ ಕಲ್ಪಿಸಬೇಕಾಗಿ ಬಂತು. ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂಗಳು ಮತ್ತು ಸಿಕ್ಖರು, ಪಂಜಾಬ್ ಮತ್ತು ದಿಲ್ಲಿ ಪ್ರದೇಶಗಳಲ್ಲಿ; ಮುಸ್ಲಿಮರು ದಿಲ್ಲಿ ಸನಿಹದ ಫರಿದಾಬಾದ್‌ನಲ್ಲಿ ಆಶ್ರಯ ಪಡೆದರು. ಹಿಂದೂ ಸಿಂಧಿಗಳು ಮುಖ್ಯವಾಗಿ ಗುಜರಾತ್, ಮಹಾರಾಷ್ಟ್ರಗಳಲ್ಲಿ ಚದುರಿದರು. ಹೀಗೆ ವಲಸೆ ಬಂದವರಿಗೆ ಬ್ರಿಟಿಷರು ರೂಪಿಸಿದ ಕಾನೂನಿನಂತೆ ಕ್ರಮೇಣ ಪೌರತ್ವ ಸಿಕ್ಕಿತು. ಟಿಬೆಟ್
ವಲಸೆ ಅಲೆ: 1959, 1986 - 96
1,82,685-ಭಾರತದಲ್ಲಿರುವ ನಿರಾಶ್ರಿತರು
ವಿಸ್ತರಣಾವಾದಿ ಚೀನ, ಮಿಲಿಟರಿ ದಬ್ಟಾಳಿಕೆ ಮೂಲಕ ಇಡೀ ಟಿಬೆಟನ್ನು ಹಂತಹಂತವಾಗಿ ಆಕ್ರಮಿಸಿ, 1959ರ ವೇಳೆಗೆ ಅಲ್ಲಿನ ಬೌದ್ಧರ ಮೇಲೆ ವ್ಯಾಪಕ ಹಿಂಸಾಚಾರ ನಡೆಸಿತು. ಟಿಬೆಟಿಯನ್ ಧರ್ಮಗುರು ದಲಾೖ ಲಾಮಾ ನೇತೃತ್ವದಲ್ಲಿ 1959ರಲ್ಲಿ ಬರೋಬ್ಬರಿ 1 ಲಕ್ಷ ಟಿಬೆಟಿಯನ್ನರು ಭಾರತಕ್ಕೆ ಮಹಾವಲಸೆ ಕೈಗೊಂಡರು. ಅದೇ ವರ್ಷ ಪ್ರಧಾನಿ ನೆಹರೂ ಅವರು ದೇಶಭ್ರಷ್ಟ ಟಿಬೆಟಿಯನ್ನರಿಗೆ ಭಾರತದಲ್ಲಿ ಸರಕಾರ ನಡೆಸಲು ಅನುಕೂಲವಾಗುವಂತೆ, ವಿವಿಧೆಡೆ ಭೂಭಾಗಗಳನ್ನು ನೀಡಿ, ನಿರಾಶ್ರಿತ ಶಿಬಿರ ಗಳನ್ನು ತೆರೆಯಲು ನೆರವಾದರು. ಹಿಮಾಚಲ ಪ್ರದೇಶ, ಕರ್ನಾಟಕ ಸಹಿತ ವಿವಿಧೆಡೆ ಈಗಲೂ ಟಿಬೆಟಿಯನ್ ನಿರಾಶ್ರಿತ ಶಿಬಿರಗಳಿವೆ. ಬಾಂಗ್ಲಾದೇಶ
ವಲಸೆ ಅಲೆ: 1947, 1971
1.8ಕೋಟಿ-ಭಾರತದಲ್ಲಿರುವ ನಿರಾಶ್ರಿತರು
1947ರ ಪೂರ್ವ ಪಾಕಿಸ್ಥಾನ ರಚನೆ ವೇಳೆ, ಬಾಂಗ್ಲಾ ನೆಲ ಭಾರೀ ಹಿಂಸಾಚಾರಕ್ಕೆ ಸಾಕ್ಷಿ ಆಯಿತು. ಅಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಲಕ್ಷಾಂತರ ಸಂಖ್ಯೆಯ ಹಿಂದೂಗಳು, ಜೀವಭಯದಿಂದ ಭಾರತಕ್ಕೆ ವಲಸೆ ಬಂದರು. ಈ ಪೈಕಿ ಬಹುತೇಕರು ಬಂಗಾಲ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಬಹುತೇಕರಿಗೆ ಪೌರತ್ವವೂ ಸಿಕ್ಕಿದೆ. ಆದರೆ ಬಾಂಗ್ಲಾ ನಿವಾಸಿಗಳ ವಲಸೆ ಇಲ್ಲಿಗೇ ನಿಲ್ಲಲಿಲ್ಲ. 1971ರಲ್ಲಿ ಬಾಂಗ್ಲಾ ವಿಮೋಚನೆ ವೇಳೆ, ಪಾಕಿಸ್ಥಾನ ಮಿಲಿಟರಿ ಇಲ್ಲಿ ಹಿಂಸಾಚಾರ ನಡೆಸಿದ್ದರ ಪರಿಣಾಮ, ಗಣನೀಯ ಪ್ರಮಾಣದಲ್ಲಿ ನಿರಾಶ್ರಿತರು ಭಾರತಕ್ಕೆ ಓಡೋಡಿ ಬಂದರು. ಒಂದು ಅಂದಾಜಿನ ಪ್ರಕಾರ, 1 ಕೋಟಿ ಬಾಂಗ್ಲಾ ನಿರಾಶ್ರಿತರು ಈ ವೇಳೆ ಭಾರತ ಪ್ರವೇಶಿಸಿದ್ದಾರೆ. ದಶಕಗಳವರೆಗೆ ಈಶಾನ್ಯ ರಾಜ್ಯಗಳ ಗಡಿಗಳ ಮೂಲಕ ನುಸುಳಿ ಬಂದವರೂ ಸಾಕಷ್ಟು ಮಂದಿ. ಆಫ್ಘಾನಿಸ್ತಾನ
ವಲಸೆ ಅಲೆ: 1979, 1996, 2021
02ಲಕ್ಷ-ಭಾರತದಲ್ಲಿರುವ ನಿರಾಶ್ರಿತರು
1979ರಲ್ಲಿ ಸೋವಿಯತ್ ರಷ್ಯಾ ಆಕ್ರಮಣದ ಬಳಿಕ ಅಫ್ಘಾನಿಸ್ಥಾನದ ವಿವಿಧೆಡೆ ನೆಲೆಸಿದ್ದ ಹಿಂದೂಗಳು, ಸಿಕ್ಖ್, ಮುಸಲ್ಮಾನ ಸಮು ದಾಯದವರು ಅನಂತರದ ವರ್ಷಗಳಲ್ಲಿ ಭಾರತಕ್ಕೆ ವಲಸೆ ಬಂದಿದ್ದಾರೆ. 1996ರ ಆಂತರಿಕ ದಂಗೆ ವೇಳೆಯ ನಿರಾಶ್ರಿತರಿ ಗೂ ಭಾರತ ಆಶ್ರಯ ನೀಡಿದೆ. 1990ರ ಪೂರ್ವದಲ್ಲಿ ಬಂದವರಿಗೆ ಭಾರತ ಪೌರತ್ವ ನೀಡಿದ್ದು, ದಿಲ್ಲಿಯ ಸುತ್ತಮುತ್ತ ಬೀಡುಬಿಟ್ಟಿದ್ದಾರೆ. 2021ರಲ್ಲಿ ಅಫ್ಘಾನ್, ತಾಲಿಬಾನ್‌ನ ಕೈವಶ ಆದಾಗಲೂ ಸಂತ್ರಸ್ತರನ್ನು ಭಾರತ ಸಂತೈಸಿದೆ. ಮ್ಯಾನ್ಮಾರ್
ವಲಸೆ ಅಲೆ: 2017
18,000-ಭಾರತದಲ್ಲಿರುವ ರೊಹಿಂಗ್ಯಾಗಳು
ಮ್ಯಾನ್ಮಾರ್ ಸೇನೆಯ ಅಟ್ಟಹಾಸದ ಪರಿಣಾಮ ಸಹಸ್ರಾರು ಸಂಖ್ಯೆಯ ರೊಹಿಂಗ್ಯಾ ಮುಸಲ್ಮಾನ್ ನಿರಾಶ್ರಿತರು ಬಾಂಗ್ಲಾ, ಭಾರತದತ್ತ ವಲಸೆ ಬಂದಿದ್ದಾರೆ. ಇವರನ್ನೆಲ್ಲ ಮ್ಯಾನ್ಮಾರ್‌ಗೆ ಮರಳಿಸಲು ಕೇಂದ್ರ ಸರಕಾರ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿವೆ. “ರೊಹಿಂಗ್ಯಾಗಳು ಮೂಲತಃ ನಮ್ಮವರಲ್ಲ’ ಅಂತಲೇ ಮ್ಯಾನ್ಮಾರ್ ಪ್ರತಿಪಾದಿಸುತ್ತಿದೆ.