Advertisement
ಈ ಪೈಕಿ 21 ದೇಶಗಳಿಗೆ ವಾಣಿಜ್ಯಾಧಾರಿತವಾಗಿ ಹಾಗೂ ಉಳಿದ ದೇಶಗಳಿಗೆ ದೇಣಿಗೆಯ ರೂಪದಲ್ಲಿ ಔಷಧವನ್ನು ನೀಡಲಾಗುವುದು.
ಕೋವಿಡ್ ಪರಿಣಾಮದಿಂದ ಭಾರತದ ಹಣಕಾಸು ಪರಿಸ್ಥಿತಿಯ ಮೇಲೆ ಆಗಿರುವ ಹಿಂಜರಿತಗಳನ್ನು ಪ್ರಧಾನಿ ನರೇಂದ್ರ ಮೋದಿ ಅವಗಾಹನೆ ಮಾಡಿದರು. ಈ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮತ್ತು ಕೇಂದ್ರದ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಬಹು ಮುಖ್ಯವಾಗಿ, ಆರ್ಥಿಕ ಹಿಂಜರಿತದಿಂದ ದೇಶವನ್ನು ಮೇಲೆತ್ತುವ ಬಗ್ಗೆ ಚರ್ಚೆ ನಡೆಸಲಾಯಿತು. ಈಗಾಗಲೇ ಕೆಲವಾರು ಪ್ಯಾಕೇಜ್‌ಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಲಾಕ್ ಡೌನ್ ಮುಂದುವರಿದ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನಂತರದ ಅವಧಿಯಲ್ಲಿ ಕೈಗೊಳ್ಳಬಹುದಾದ 2ನೇ ಸುತ್ತಿನ ಸುಧಾರಣ ಕ್ರಮಗಳ ಬಗ್ಗೆ ಮಾತುಕತೆ ನಡೆಸಲಾಯಿತು.