Advertisement

ನೇಪಾಲದ ಸಹಾಯಕ್ಕೆ ಭಾರತ ಸದಾ ಸಿದ್ಧ

08:41 AM May 12, 2018 | Harsha Rao |

ಜನಕಪುರಿ: ಭಾರತದ ಆದ್ಯತೆಯ ನೆರೆ ದೇಶಗಳ ಪಟ್ಟಿಯಲ್ಲಿ ನೇಪಾಲ ಅಗ್ರಸ್ಥಾನದಲ್ಲಿದ್ದು, ಆಪತ್ಕಾಲದಲ್ಲಿ ಭಾರತ ನೇಪಾಲದ ಸಹಾಯಕ್ಕೆ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದರು. ಇದೇ ವೇಳೆ, ಪುರಾಣ ಪ್ರಸಿದ್ಧ ಜನಕ ಪುರಿಯ ಅಭಿವೃದ್ಧಿಗಾಗಿ ಭಾರತದಿಂದ 100 ಕೋಟಿ ರೂ.ಗಳ ಅನುದಾನವನ್ನು ಮೋದಿ ಘೋಷಿಸಿದರು. 

Advertisement

ಎರಡು ದಿನಗಳ ಭೇಟಿಗಾಗಿ ಶುಕ್ರವಾರ ನೇಪಾಳಕ್ಕೆ ತೆರಳಿರುವ ಮೋದಿ, ತಮ್ಮ ಪ್ರವಾಸದ ಮೊದಲ ಭಾಗವಾಗಿ ಜನಕಪುರಕ್ಕೆ ತೆರಳಿದರು. ಅಲ್ಲಿನ ಪುರಸಭೆಯಿಂದ ಆಯೋಜಿಸಲಾಗಿದ್ದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ಮತ್ತು ನೇಪಾಲ ರಾಷ್ಟ್ರಗಳು ಶತಮಾನಗಳಿಂದಲೂ ಉತ್ತಮ ಬಾಂಧವ್ಯ ಹೊಂದಿವೆ.

ಕಷ್ಟ-ಸುಖಗಳಲ್ಲಿ ಪರಸ್ಪರ ಭಾಗಿಯಾಗಿವೆ. ಈ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು” ಎಂದರು. ತಮ್ಮ ಈ ಮಾತುಗಳಿಗೆ ಪೂರಕವಾಗಿ, ರಾಮಚರಿತ ಮಾನಸ ಗ್ರಂಥದ ಸ್ನೇಹಿತನ ಕಷ್ಟಕಾಲದಲ್ಲಿ ಆತನ ನೆರವಿಗೆ ಧಾವಿಸುವವನೇ ನಿಜವಾದ ಸ್ನೇಹಿತ ಎಂಬ ವಾಕ್ಯವನ್ನು ಉಲ್ಲೇಖೀಸಿದರು. 

ಪ್ರಧಾನಿಯಲ್ಲ, ಪ್ರಮುಖ ಯಾತ್ರಾರ್ಥಿ: ಸಮಾರಂಭದಲ್ಲಿ, ಪ್ರಧಾನಿ ಮೋದಿ, ನೇಪಾಳಿ ಹಾಗೂ ಮೈಥಿಲಿ ಭಾಷೆಯಲ್ಲೇ ಭಾಷಣ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತಮ್ಮ ಮಾತನ್ನು ಆರಂಭಿಸುವ ಮುನ್ನ “ಜಯ್‌ ಸಿಯಾ ರಾಮ್‌’ (ಜೈ ಸೀತಾರಾಮ್‌) ಎಂದು ಮೂರು ಬಾರಿ ನುಡಿದು ನಂತರ ತಮ್ಮ ಮಾತುಗಳನ್ನು ಆರಂಭಿಸಿದರು. ಸೀತಾ ಮಾತೆಯ ಜನ್ಮ ಸ್ಥಳಕ್ಕೆ ತಾವು ಪ್ರಧಾನಿಯಾಗಿ ಬಂದಿಲ್ಲ. ಪ್ರಮುಖ ಯಾತ್ರಾರ್ಥಿಯಾಗಿ ಬಂದಿದ್ದೇನೆ ಎಂದರು. ಮೊದಲು ಅಲ್ಲಿನ ಐತಿಹಾಸಿಕ ಸೀತಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿಯಾದ ನಂತರ ಮೋದಿ, ನೇಪಾಲಕ್ಕೆ ಭೇಟಿ ನೀಡುತ್ತಿರುವುದು ಇದು 3ನೇ ಬಾರಿ. 

ವಿಶೇಷ ಪ್ರಾರ್ಥನೆ
ಜನಕಪುರಕ್ಕೆ ಕಾಲಿಟ್ಟ ನಂತರ, ಜಾನಕಿ ದೇಗುಲಕ್ಕೆ ತೆರಳಿದ ಪಿಎಂ ಮೋದಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಭೇಟಿ ನಿಮಿತ್ತ ಷೋಡಶೋಪಚಾರ ಪೂಜೆ ಏರ್ಪಡಿಸಲಾಗಿತ್ತು. ನಂತರ, 10 ನಿಮಿಷಗಳ ಕಾಲ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಷೋಡಶೋಪಚಾರ ನಿಮಿತ್ತ ಜಾನಕಿ ಮಾತೆಯ ಮೂರ್ತಿಯನ್ನು ವಸ್ತ್ರಾಭರಣಗಳಿಂದ ಅಲಂಕರಿಸಲಾಗಿತ್ತು. ಈ ದೇಗುಲಕ್ಕೆ ರಾಷ್ಟ್ರಪತಿಗಳಾಗಿದ್ದ ನೀಲಂ ಸಂಜೀವ ರೆಡ್ಡಿ, ಗ್ಯಾನಿ ಜೈಲ್‌ಸಿಂಗ್‌, ಪ್ರಣವ್‌ ಮುಖರ್ಜಿ ಭೇಟಿ ನೀಡಿ , ಷೋಡಶೋಪಚಾರದಲ್ಲಿ ಪಾಲ್ಗೊಂಡಿದ್ದರು. ಸೀತೆ ನೆನಪಿಗಾಗಿ 1910ರಲ್ಲಿ ಈ ದೇಗುಲ ನಿರ್ಮಿಸಲಾಗಿದ್ದು, 164 ಅಡಿ ಎತ್ತರದಲ್ಲಿರುವ ಈ ದೇಗುಲ 4860 ಚದರ ಅಡಿ ವಿಸ್ತೀರ್ಣದಲ್ಲಿದೆ. 

Advertisement

ರಾಷ್ಟ್ರಪತಿ, ಉಪರಾಷ್ಟ್ರಪತಿ ಭೇಟಿ
ಮೋದಿಯವರಿಗೆ ನೇಪಾಲ ರಾಷ್ಟ್ರಪತಿ ಬಿಂದ್ಯಾ ದೇವಿ ಭಂಡಾರಿ ಅವರ ಅಧಿಕೃತ ನಿವಾಸವಾದ “ಸೀಟಲ್‌ ನಿವಾಸ್‌ ’ನಲ್ಲಿ ನೇಪಾಲ ಸೇನೆಯ ವತಿಯಿಂದ ಗೌರವ ವಂದನೆ ನೀಡಲಾಯಿತು. ನಂತರ, ಭಂಡಾರಿ ಜತೆ ಮೋದಿ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ, ನೇಪಾಲದ ಉಪ ರಾಷ್ಟ್ರಪತಿ ನಂದಾ ಬಹಾದ್ದೂರ್‌ ಪುನ್‌ ಅವರನ್ನೂ ಭೇಟಿ ಮಾಡಿದರು.

ಸೀತಾ,ರಾಮ ಜನ್ಮಸ್ಥಳ  ನಡುವೆ ನೇರ ಸಂಪರ್ಕ
ಸೀತಾಮಾತೆಯ ಜನ್ಮ ಸ್ಥಳವಾದ ನೇಪಾಲದ ಜನ ಕಪುರ ಮತ್ತು ಶ್ರೀರಾಮನ ಕೈಹಿಡಿದು ಸೊಸೆಯಾಗಿ ಬಂದ ಪಟ್ಟಣವಾದ ಉತ್ತರ ಪ್ರದೇಶದ ಅಯೋಧ್ಯೆಯ ನಡುವೆ ನೇರ ಬಸ್‌ ಸಂಚಾರ ಆರಂಭವಾಗಿದೆ. ನೇಪಾಲಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಶುಕ್ರ ವಾರ ಈ ಹೊಸ ಬಸ್‌ ಸಂಚಾರವನ್ನು ಜಂಟಿಯಾಗಿ ಉದ್ಘಾಟಿಸಿದರು. ಎರಡೂ ದೇಶಗಳು ಆರಂಭಿಸಿರುವ “ರಾಮಾಯಣ ಸಕೀìಟ್‌’ ಯೋಜನೆಯಡಿ ಈ ಸೌಲಭ್ಯ ಕಲ್ಪಿಸಲಾಗಿದೆ. 

ಏನಿದು ರಾಮಾಯಣ ಸಕೀìಟ್‌?
ರಾಮಾಯಣಕ್ಕೆ ಸಂಬಂಧ ಪಟ್ಟ ಅನೇಕ ಐತಿಹಾಸಿಕ ಸ್ಥಳಗಳು ಭಾರತ, ನೇಪಾಳಗಳಲ್ಲಿವೆ. ಭಾರತದಲ್ಲಿ ಇಂಥ ಪ್ರಮುಖ ಸ್ಥಳಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗಾಗಿ ರಾಮಾಯಣ ಸಕೀìಟ್‌ ಎಂಬ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಡಿ , ಭಾರತದಲ್ಲಿ ಅಯೋಧ್ಯೆ, ನಂದಿ ಗ್ರಾಮ, ಶ್ರಿಂಗವೇರ್ಪುರ ಮತ್ತು ಚಿತ್ರಕೂಟ (ಉತ್ತರ ಪ್ರದೇಶ), ಸೀತಾಮಾಹಿì, ಬುಕ್ಸಾರ್‌ ಮತ್ತು ದರ್ಭಾಂಗ (ಬಿಹಾರ), ಚಿತ್ರಕೂಟ (ಮಧ್ಯ ಪ್ರದೇಶ), ಮಹೇಂದ್ರ ಗಿರಿ (ಒಡಿಶಾ), ಜಗದಾಲ್ಪುರ (ಛತ್ತೀಸ್‌ಗಢ), ನಾಸಿಕ್‌,ನಾಗುºರ (ಮಹಾರಾಷ್ಟ್ರ), ಭದ್ರಾ ಚಲಂ(ತೆಲಂಗಾಣ), ಹಂಪಿ (ಕರ್ನಾಟಕ), ರಾಮೇಶ್ವರಂ (ತಮಿಳುನಾಡು) ಪ್ರಾಂತ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.

ಅಯೋಧ್ಯೆ ಮಹತ್ವ
ಮರ್ಯಾದಾ ಪುರುಷೋತ್ತಮನೆಂದೇ ಖ್ಯಾತಿ ಪಡೆದ ಶ್ರೀರಾಮ ಆಳಿದ ಕೋಸಲ ರಾಜ್ಯದ ರಾಜಧಾನಿಯೇ ಅಯೋಧ್ಯೆ. ಸೂರ್ಯ ವಂಶದ ದೊರೆಯಾದ ಈತನ ಆಳ್ವಿಕೆಯ ಕಾಲದಲ್ಲಿ ಕೋಸಲ ರಾಜ್ಯವು ಸುಭಿಕ್ಷವಾಗಿ, ಸಂಪದ್ಭರಿತವಾಗಿತ್ತೆಂದು ವರ್ಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next