Advertisement

ತಂತ್ರಜ್ಞಾನ, ಆರ್ಥಿಕತೆ ಆಧ್ಯಾತ್ಮದಲ್ಲೂ ಭಾರತ ಮುಂದು

08:42 PM Jul 04, 2023 | Team Udayavani |

ಅಮರಾವತಿ: ವಿಶ್ವರಾಷ್ಟ್ರಗಳ ನಡುವೆ ಭಾರತ ವಿಶಿಷ್ಟ ಛಾಪು ಮೂಡಿಸುತ್ತಿದ್ದು, ತಂತ್ರಜ್ಞಾನ-ಆರ್ಥಿಕತೆ ಮಾತ್ರವಲ್ಲದೇ, ಧಾರ್ಮಿಕ ಶ್ರದ್ಧಾಕೇಂದ್ರಗಳ ಪುನಶ್ಚೇತನದ ಮೂಲಕ ಅಧ್ಯಾತ್ಮ ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

Advertisement

ಆಂಧ್ರಪ್ರದೇಶದ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿ ಸಾಯಿ ಹಿರಾ ಗ್ಲೋಬಲ್‌ ಕನ್ವೆನÒನ್‌ ಸೆಂಟರ್‌ ಅನ್ನು ಪ್ರಧಾನಿ ವರ್ಚುವಲ್‌ ಆಗಿ ಮಂಗಳವಾರ ಉದ್ಘಾಟಿಸಿದರು. ಈ ವೇಳೆ ಮಾತನಾಡಿರುವ ಅವರು, ದೇಶದಲ್ಲಿ ಆನ್‌ಲೈನ್‌ ವಹಿವಾಟುಗಳ ಮೂಲಕ ಡಿಜಿಟಲ್‌ ಕ್ರಾಂತಿ ಶುರುವಾಗಿದೆ.

ಪುಟ್ಟಪರ್ತಿ ಜನರು ಇದಕ್ಕೆ ಕೈ ಜೋಡಿಸುವ ಮೂಲಕ ಜಿಲ್ಲೆಯನ್ನು ಡಿಜಿಟಲ್‌ ಆರ್ಥಿಕತೆಯತ್ತ ಕೊಂಡೊಯ್ಯಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೇ, ಎಲ್ಲರೂ ಕೈ ಜೋಡಿಸಿದರೆ, ಶ್ರೀ ಸತ್ಯ ಸಾಯಿ ಬಾಬಾ ಅವರ ಮುಂದಿನ ಜನ್ಮೋತ್ಸವದ ವೇಳೆಗೆ ಈ ಗುರಿ ಸಾಧಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next