Advertisement

ದೇವರು-ಧರ್ಮ ನಂಬಿರುವ ದೇಶ ಭಾರತ

12:15 PM May 31, 2022 | Team Udayavani |

ಅಫಜಲಪುರ: ಕೋಟಿ ಕೋಟಿ ದೇವರು, ಅಸಂಖ್ಯಾತ ಧರ್ಮಗಳನ್ನು ಒಡಲೊಳಗಿಟ್ಟುಕೊಂಡು ಎಲ್ಲಕ್ಕೂ ಗೌರವ ಕೊಡುವ ಏಕ ಮಾತ್ರ ದೇಶ ನಮ್ಮದು, ಭಾರತ ದೇವರು ಮತ್ತು ಧರ್ಮಗಳನ್ನು ನಂಬಿರುವ ದೇಶವಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್‌ ಹೇಳಿದರು.

Advertisement

ತಾಲೂಕಿನ ಮಲ್ಲಾಬಾದ ಗ್ರಾಮದ ವಿಜಯ ಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭೋತ್ಸವ ಹಾಗೂ ಲಕ್ಷ ದೀಪೋತ್ಸವ ಮತ್ತು ಧರ್ಮ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗಿಯಾಗಿರೋದು ನಮ್ಮ ಪುಣ್ಯ, ಇಂತಹ ಕಾರ್ಯಕ್ರಮದಲ್ಲಿ ಒಳ್ಳೆಯ ವಿಚಾರಗಳನ್ನು ಕಲಿತು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಧರ್ಮದ ಹಾದಿಯಲ್ಲಿ ಸಾಗೋಣ ಎಂದರು.

ಅಫಜಲಪುರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ವಿಜಯಲಕ್ಷ್ಮೀ  ದೇವಿಗೆ ಪುಷ್ಪಾರ್ಚನೆ ಹಾಗೂ ಬಡದಾಳ ಮಠದ ಡಾ| ಅಭಿನವ ಚನ್ನಮಲ್ಲ ಶಿವಾಚಾರ್ಯರು ಕಳಸಾರೋಹಣ ನೆರವೇರಿಸಿ ಮಾತನಾಡಿ, ನಿತ್ಯದ ಜಂಜಾಟಗಳನ್ನು ಸ್ವಲ್ಪ ಬದಿಗಿಟ್ಟು ಇಂತಹ ಧರ್ಮ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸು ನಿರಾಳವಾಗಲಿದೆ. ಮಲ್ಲಾಬಾದ ಗ್ರಾಮಸ್ಥರ ಭಕ್ತಿ ಬಹಳ ವಿಶೇಷವಾದುದ್ದು, ಇದಕ್ಕೆ ಸಾಕ್ಷಿ ಈ ಧರ್ಮ ಸಭೆ, ಲಕ್ಷ ದೀಪೋತ್ಸವವಾಗಿದೆ ಎಂದರು.

ಕುಮಸಗಿ ಮಠದ ಶಿವಾನಂದ ಶಿವಾಚಾರ್ಯರು ಆಶೀರ್ವಚನ ನೀಡಿದರು. ಗೋಳಸಾರ ಮಠದ ಅಭಿನವ ಪುಂಡಲಿಂಗ ಶಿವಯೋಗಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಚಿನ್ಮಯಗಿರಿ ಮಹಾಂತ ಮಠದ ಸಿದ್ದರಾಮ ಶಿವಾಚಾರ್ಯರು ಷಠಸ್ಥಲ ಧ್ವಜಾರೋಹಣ ನೆರವೇರಿಸಿದರು.

Advertisement

ಮುಖಂಡರಾದ ಪ್ರವೀಣ ಗುತ್ತೆದಾರ, ಶಿವಾನಂದ ಗಾಡಿ, ಸಿದ್ಧಾರ್ಥ ಬಸರಿಗಿಡ, ಮಡಿವಾಳಪ್ಪ ಗೋಳಸಾರ, ಸಾಯಬಣ್ಣ ಪೂಜಾರಿ, ಸಾಯಬಣ್ಣ ಜಮಾದಾರ, ರಾಜು ಬಡದಾಳ, ದಯಾನಂದ ದೊಡ್ಮನಿ, ಭೀಮಶಾ ದೊಡ್ಮನಿ, ಶಿವಪುತ್ರ ಜಮಾದಾರರ, ಗಿರೀಶ್‌ ಪಾಟೀಲ್‌, ರಮೇಶ ನಿಲಗಾರ, ಲಚ್ಚಪ್ಪ ಜಮಾದಾರ, ಈರಣ್ಣ ನಾವದಗಿ, ಶಿವಶರಣಪ್ಪ ಸಿರಿ, ರಮೇಶ ಗಾಡೆಕರ, ಚಂದು ಕರ್ಜಗಿ, ಚಂದು ಬನ್ನಟ್ಟಿ, ನಾಗೇಶ ಕೊಳ್ಳಿ, ಲತೀಫ್‌ ಪಟೇಲ್‌, ದುಂಡಪ್ಪ ತಳೆವಾಡ, ಮಹಾಂತಪ್ಪ ಬಬಲೇಶ್ವರ, ದಿಲೀಪ್‌ ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next