Advertisement

Canada: ಭಾರತ ಅಪಾಯಕಾರಿ ಶಕ್ತಿ: ಮತ್ತೆ ಕೆನಡಾದ ಧಿಮಾಕು!

12:46 AM Feb 04, 2024 | Team Udayavani |

ಹೊಸದಿಲ್ಲಿ: ಖಾಲಿಸ್ಥಾನಿ ಉಗ್ರ ಹರ್‌ದೀಪ್‌ಸಿಂಗ್‌ ನಿಜ್ಜರ್‌ನನ್ನು ಭಾರತವೇ ಹತ್ಯೆಗೈದಿದೆ ಎಂದು ವ್ಯರ್ಥಾರೋಪ ಮಾಡಿರುವ ಕೆನಡಾ ಸರಕಾರ ಈಗ ಮತ್ತೂಂದು ಧಿಮಾಕು ಪ್ರದರ್ಶಿಸಿದೆ. 2025ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಅಲ್ಲಿನ ಸಂಸದೀಯ ಚುನಾವಣೆ ವೇಳೆ ಭಾರತ ಸರಕಾರ ಹಸ್ತಕ್ಷೇಪ ನಡೆಸಲಿದೆ ಎಂಬ ಸುಳ್ಳು ಆರೋಪ ಮಾಡಿದೆ. ಈ ಬಗ್ಗೆ ತನಿಖೆಗೆ ತ್ರುದೌ ಆದೇಶ ನೀಡಿದ್ದಾರೆ. ಇದರ ಜತೆಗೆ ಭಾರತವನ್ನು ಅತ್ಯಂತ ಅಪಾಯಕಾರಿ ವಿದೇಶಿ ಶಕ್ತಿ ಎಂದು ಬಿಂಬಿಸುವ ಪ್ರಯತ್ನವನ್ನು ಕೂಡ ಜಸ್ಟಿನ್‌ ತ್ರುದೌ ಸರಕಾರ ಮಾಡುತ್ತಿದೆ. ಆದರೆ ಕೆನಡಾ ಸರಕಾರದ ಹೊಸ ಆರೋಪಗಳಿಗೆ ಭಾರತ ಸರಕಾರ ಪ್ರತಿಕ್ರಿಯೆ ನೀಡಿಲ್ಲ.

Advertisement

ಕೆನಡಾ ಸರಕಾರದ ಭದ್ರತೆ ಸೇವೆಗಳ ಇಲಾಖೆ ನೀಡಿದ ರಹಸ್ಯ ವರದಿಯಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ಇದುವರೆಗೆ ಚೀನ ಮತ್ತು ರಷ್ಯಾಗಳು ತನ್ನ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿವೆ ಎಂದು ಜಸ್ಟಿನ್‌ ತ್ರುದೌ ಸರಕಾರ ಆರೋಪ ಮಾಡುತ್ತಿತ್ತು. 2022ರ ಅಕ್ಟೋಬರ್‌ನಲ್ಲಿ ನೀಡಲಾಗಿದ್ದ ವರದಿಯಲ್ಲಿ ಭಾರತವನ್ನು ಕೂಡ, “ಬೆದರಿಕೆ ಉಂಟು ಮಾಡುವ ಶಕ್ತಿ’ ಎಂದು ಬಿಂಬಿಸಲಾಗಿದೆ.

ವರದಿಯ ಒಟ್ಟು 3 ಪುಟಗಳಲ್ಲಿ ಭಾರತವು ಮುಂದಿನ ವರ್ಷ ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆಗಳಿವೆ ಎಂದು ಸುಳ್ಳು ಆರೋಪಗಳನ್ನು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next