Advertisement

Silkyara ಕಾರ್ಮಿಕರ ರಕ್ಷಣೆ: ಭಾರತ ಅದ್ಭುತ ದೇಶ ಎಂದ ಸೌರವ್ ಗಂಗೂಲಿ

02:55 PM Dec 01, 2023 | Vishnudas Patil |

ಹೊಸದಿಲ್ಲಿ: “ಭಾರತ ಅದ್ಭುತ ದೇಶ. ನಂಬಲಾಗದ ವಿಸ್ಮಯಗಳಿರುವ ದೇಶ. ರಕ್ಷಣ ಕಾರ್ಯಾಚರಣೆಗಳು ಹೇಗೆ ನಡೆಯುತ್ತವೆ ಎಂಬುದನ್ನು ನೀವು ನೋಡಿದಾಗ, ನಾವು ಎಷ್ಟು ಅದೃಷ್ಟವಂತರು ಎಂದು ಹೇಳದೇ ಇರಲು ಸಾಧ್ಯವಿಲ್ಲ” ಎಂದು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಹೇಳಿಕೆ ನೀಡಿದ್ದಾರೆ.

Advertisement

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಮಂದಿ ಕಾರ್ಮಿಕರ ರಕ್ಷಣ ಕಾರ್ಯಾಚರಣೆಯ ಕುರಿತು ಸೌರವ್ ಗಂಗೂಲಿ ಅವರು ಈ ಪ್ರತಿಕ್ರಿಯೆ ನೀಡಿದ್ದು, ಈ ದೇಶದಲ್ಲಿ ಜನರು ಕಷ್ಟದಲ್ಲಿರುವಾಗ ಪ್ರತಿಯೊಬ್ಬರೂ ಪ್ರಯತ್ನಿಸುವ ರೀತಿ ನೋಡಲು ಅದ್ಭುತವಾಗಿದೆ” ಎಂದರು.

”ರೋಹಿತ್ ಶರ್ಮ ಭಾರತ ತಂಡದ ನಾಯಕನಾಗಿ ಮುಂದುವರಿಯಬೇಕು. ಏಕೆಂದರೆ ಅವರು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರೊಬ್ಬ ನಾಯಕ. ಹಾಗಾಗಿ ಅವರು ಟಿ 20 ವಿಶ್ವಕಪ್‌ವರೆಗೆ ನಾಯಕರಾಗಿ ಮುಂದುವರಿಯುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಮತ್ತು ನಾನು ಭಾವಿಸುತ್ತೇನೆ” ಎಂದು ಗಂಗೂಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next