Advertisement
ತಮ್ಮ ಮೂರು ದಿನಗಳ ಭಾರತ ಪ್ರವಾಸದ ಕೊನೆಯ ದಿನವಾದ ಶನಿವಾರ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ರೊಹಾನಿ ಈ ವಿಚಾರ ತಿಳಿಸಿದ್ದಾರೆ. ಅಲ್ಲದೆ, ಉಭಯ ನಾಯಕರು ಚಬಹಾರ್ ಬಂದರು ಅಭಿವೃದ್ಧಿ ಸೇರಿದಂತೆ ಒಟ್ಟು ಒಂಬತ್ತು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ, ಒಟ್ಟು 18 ತಿಂಗಳಲ್ಲಿ ಚಬಹಾರ್ ಬಂದರ್‌ನ ಒಂದು ಭಾಗ ಕಾರ್ಯಾರಂಭ ಮಾಡಬೇಕು ಎಂಬ ವಿಚಾರವೂ ಸೇರಿದೆ. ಪ್ರಮುಖವಾಗಿ ಚಬಹಾರ್ ಬಂದರಿನಲ್ಲಿ ಶಾಹಿದ್ ಬೆಹೆಸ್ತಿಯ ಮೊದಲ ಹಂತವನ್ನು 18 ತಿಂಗಳಲ್ಲಿ ಕಾರ್ಯಾರಂಭ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಜತೆಗೆ ಕೃಷಿ, ವೈದ್ಯಕೀಯ, ವೀಸಾ, ಆರೋಗ್ಯ, ಅಂಚೆ ಕ್ಷೇತ್ರಗಳಲ್ಲಿಯೂ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದಲ್ಲದೆ ಇನ್ನೂ ನಾಲ್ಕು ಹೆಚ್ಚುವರಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.ಹೊಸದಿಲ್ಲಿಯಲ್ಲಿ ಶನಿವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಇದಾದ ಬಳಿಕ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ರೊಹಾನಿ ಭೇಟಿ ಮಾಡಿದರು.
ಚಬಹಾರ್ ಮತ್ತು ಶಾಹಿದ್ ಬೆಹಸ್ತಿ ಬಂದರು ಅಭಿವೃದ್ಧಿ
ದ್ವಿತೆರಿಗೆ ತಡೆಗೆ ಒಪ್ಪಂದ
ವೀಸಾ ವಿನಾಯಿತಿ ಬಗ್ಗೆ ಒಪ್ಪಂದ
ಗಡೀಪಾರು ಒಪ್ಪಂದದ ಸ್ಥಿರೀಕರಣ
ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರ
ಕೃಷಿ ಕ್ಷೇತ್ರದಲ್ಲಿ ಸಹಕಾರ
ಆರೋಗ್ಯ ಕ್ಷೇತ್ರದಲ್ಲಿ ಒಪ್ಪಂದ
ಅಂಚೆ ಕ್ಷೇತ್ರದಲ್ಲಿ ಒಪ್ಪಂದ
ವ್ಯಾಪಾರ ಕ್ಷೇತ್ರದಲ್ಲಿ ಸಹಭಾಗಿತ್ವ