Advertisement

ವಿಶ್ವಸಂಸ್ಥೆ ನಿಲುವಳಿಯಲ್ಲಿ ಭಾರತ ನಿರ್ಲಿಪ್ತ ನೀತಿ

02:12 AM Jun 30, 2019 | Team Udayavani |

ನ್ಯೂಯಾರ್ಕ್‌: ಗಲ್ಲಿಗೇರಿಸುವಾಗ ಬಳಸುವ ಸಾಮಗ್ರಿಗಳ ವಹಿವಾಟಿನ ಮೇಲೆ ನಿರ್ಬಂಧ ಹೇರುವ ಕುರಿತು ವಿಶ್ವಸಂಸ್ಥೆ ಕೈಗೊಂಡ ನಿಲುವಳಿಗೆ ಭಾರತ ಮತ ಹಾಕದೇ ನಿರ್ಲಿಪ್ತ ನೀತಿಯನ್ನು ತಾಳಿದೆ. ವಿಶ್ವಸಂಸ್ಥೆಯ ನಿಲುವಳಿ ಪ್ರಕಾರ, ಗಲ್ಲಿಗೇರಿಸುವುದು ಅಪರಾಧವಾಗಿದೆ. ಆದರೆ ಭಾರತದಲ್ಲಿ ಗಲ್ಲಿಗೇರಿಸುವ ಶಿಕ್ಷೆ ಜಾರಿಯಲ್ಲಿದೆ. ಹೀಗಾಗಿ ಭಾರತ ಸೇರಿದಂತೆ 44 ದೇಶಗಳು ನಿರ್ಲಿಪ್ತ ನಿಲುವು ತಾಳಿದ್ದು, 20 ದೇಶಗಳು ವಿರೋಧಿಸಿ ಮತ ಹಾಕಿವೆ. 81 ದೇಶಗಳು ಪರವಾಗಿ ಮತ ಚಲಾವಣೆ ಮಾಡಿವೆ.

Advertisement

ಗಲ್ಲಿಗೇರಿಸುವುದು, ಹಿಂಸೆ ಅಥವಾ ಅಮಾನವೀಯ ಶಿಕ್ಷೆಯಲ್ಲಿ ಬಳಸುವ ಸಾಮಗ್ರಿಗಳ ಆಮದು, ರಫ್ತು ಮತ್ತು ವರ್ಗಾವಣೆಯಲ್ಲಿ ಅಂತಾರಾಷ್ಟ್ರೀಯ ಮಾನದಂಡವನ್ನು ಅನುಸರಿಸಿ, ನಿರ್ಬಂಧ ವಿಧಿಸಬೇಕು ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್‌ ಕರೆ ನೀಡಿದ್ದಾರೆ.ಮತದಾನದ ನಂತರ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಥಮ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ, ಹಿಂಸೆ ಮತ್ತು ಇತರ ಅಮಾನವೀಯ ಶಿಕ್ಷೆಯನ್ನು ಭಾರತ ವಿರೋಧಿಸುತ್ತದೆ. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಹಿಂಸೆಯು ಶಿಕ್ಷಾರ್ಹ ಅಪರಾಧವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next