Advertisement

ಐದು ಚೀನೀ ಉತ್ಪನ್ನಗಳ ಮೇಲೆ ಕೇಂದ್ರ ನಿಷೇಧ

07:16 PM Dec 26, 2021 | Team Udayavani |

ನವದೆಹಲಿ: ಚೀನಾದ ಉತ್ಪನ್ನಗಳ ಆಮದು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಯುಮಿನಿಯಂ ಉತ್ಪನ್ನಗಳು, ರಾಸಾಯನಿಕಗಳು ಸೇರಿದಂತೆ ಐದು ಉತ್ಪನ್ನಗಳ ಮೇಲೆ ಆ್ಯಂಟಿ ಡಂಪಿಂಗ್‌ ಸುಂಕ ವಿಧಿಸಿದೆ. ಈ ಬಗ್ಗೆ ಕೇಂದ್ರ ಪರೋಕ್ಷ ತೆರಿಗೆಗಳ ಮಂಡಳಿ ಮತ್ತು ಕಸ್ಟಮ್ಸ್‌ (ಸಿಬಿಐಸಿ) ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.

Advertisement

ಮುಂದಿನ ಐದು ವರ್ಷಗಳ ಕಾಲ ಈ ಆದೇಶ ಊರ್ಜಿತದಲ್ಲಿ ಇರಲಿದೆ. ಸೋಡಿಯಂ ಹೈಡ್ರೋಸಲ್ಫೆàಟ್‌, ಸೌರ ವಿದ್ಯುತ್‌ ಕೋಶಗಳನ್ನು, ಉಷ್ಣ ವಿದ್ಯುತ್‌ ಸ್ಥಾವರಗಳ ನಿರ್ಮಾಣಕ್ಕೆ ಬೇಕಾಗುವ ಸಿಲಿಕಾನ್‌ ಸೀಲಂಟ್‌,  ಹೈಡ್ರೋಫ್ಲೊರೋ ಕಾರ್ಬನ್‌, ಶೀತಲೀಕರಣ ವ್ಯವಸ್ಥೆಗಳ ನಿರ್ಮಾಣದಲ್ಲಿ ಬಳಕೆ ಮಾಡುವ ಹೈಡ್ರೋಫ್ಲೊರೋ ಕಾರ್ಬನ್‌ ಬ್ಲೆಂಡ್‌ಗಳ ಮೇಲೆ ಈ ಸುಂಕ ಹೇರಲಾಗಿದೆ.

ಕೇಂದ್ರ ವಾಣಿಜ್ಯ ಸಚಿವಾಲಯದ ಡೈರೆಕ್ಟೊರೇಟ್‌ ಜನರಲ್‌ ಆಫ್ ಟ್ರೇಡ್‌ ರೆಮೆಡೀಸ್‌ (ಡಿಜಿಟಿಆರ್‌) ನಡೆಸಿದ ತನಿಖೆಯ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next