Advertisement

ಭಾರತದ ಅಟ್ಟಾರಿಯಲ್ಲಿ ಬೃಹತ್ ತ್ರಿವರ್ಣ ಧ್ವಜ; ಪಾಕ್ ಗೂ ಕಾಣಿಸುತ್ತೆ!

05:58 PM Mar 06, 2017 | Sharanya Alva |

ಅಮೃತಸರ್:ಪಂಜಾಬ್ ನ ಅಮೃತಸರ್ ಸಮೀಪದ ಭಾರತ್ ಮತ್ತು ಪಾಕ್ ಗಡಿಭಾಗದ ಅಟ್ಟಾರಿಯಲ್ಲಿ ಭಾರತದ ಅತ್ಯಂತ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದೆ. 120 ಅಡಿ ಉದ್ದ, 80 ಅಡಿ ಅಗಲದ ಬೃಹತ್ ತ್ರಿವರ್ಣ ಧ್ವಜವನ್ನು ಬರೋಬ್ಬರಿ 360 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಹಾರಿಸಲಾಗಿದೆ.

Advertisement

ಭಾರತದ ಈ ತ್ರಿವರ್ಣ ಧ್ವಜ ಎಷ್ಟು ಎತ್ತರವಾಗಿದೆ ಅಂದರೆ ಪಾಕಿಸ್ತಾನದ ಹೃದಯಭಾಗವಾದ ಲಾಹೋರ್ ನಗರದ ಜನಪ್ರಿಯ ಅನಾರ್ಕಲಿ ಬಜಾರ್ ನಿಂದಲೂ ನೋಡಬಹುದಾಗಿದೆ!

ಅತೀ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರುವುದರಿಂದ ಗಾಳಿಯ ಹೊಡೆತಕ್ಕೆ ಸಿಲುಕಿ ಹರಿದು ಹೋಗದಿರಲಿ ಎಂಬ ಮುನ್ನೆಚ್ಚರಿಕೆಯಿಂದಾಗಿ ಧ್ವಜವನ್ನು ಪ್ಯಾರಾಚೂಟ್ ಮೆಟಿರಿಯಲ್ ನಿಂದ ನಿರ್ಮಿಸಲಾಗಿದ್ದು, ಇದು ಸುಮಾರು 100 ಕೆಜಿಯಷ್ಟು ತೂಕವಿದೆ ಎಂದು ವರದಿ ತಿಳಿಸಿದೆ.

360 ಅಡಿ ಎತ್ತರದ ಧ್ವಜಸ್ತಂಭ 55 ಟನ್ ತೂಕವಿದೆ. ಇದು ದೆಹಲಿಯ ಪ್ರಸಿದ್ಧ ಕುತುಬ್ ಮಿನಾರ್ ಗಿಂತಲೂ ಎತ್ತರವಿದೆ. ಈ ಧ್ವಜ ಹಾಗೂ ಧ್ವಜಸ್ತಂಭದ ನಿರ್ಮಾಣಕ್ಕಾಗಿ ತಗುಲಿದ ವೆಚ್ಚ 4 ಕೋಟಿ ರೂಪಾಯಿ. ಧ್ವಜ ಕೆಲಸದ ಕಾರ್ಯವನ್ನು ಅಮೃತಸರ್ ಇಂಪ್ರೂಮೆಂಟ್ ಟ್ರಸ್ಟ್ ಪೂರ್ಣಗೊಳಿಸಿರುವುದಾಗಿ ವರದಿ ವಿವರಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next