Advertisement
“ನೆಟ್ಸ್‌ನಲ್ಲಿ ರಾಘು ಎಸೆತಗಳನ್ನು ಎದುರಿಸುವ ಮೂಲಕ ನಾವು ವೇಗದ ಬೌಲಿಂಗ್ ದಾಳಿಯನ್ನು ನಿಭಾಯಿಸುವ ರೀತಿಯೇ ಬದಲಾಗಿದೆ. ಇದರಲ್ಲಿ ಹೆಚ್ಚು ಹೆಚ್ಚು ಯಶಸ್ಸು ಸಾಧಿಸುತ್ತ ಬಂದಿದ್ದೇವೆ. ಇದು ನನ್ನ ವೈಯಕ್ತಿಕ ಅನುಭವವೂ ಹೌದು’ ಎಂದು ಕೊಹ್ಲಿ ಹೇಳಿದರು. “ರಾಘವೇಂದ್ರ ಅವರು ಆಟಗಾರರ ಫುಟ್‌ವರ್ಕ್, ಬ್ಯಾಟ್ ಮೂವ್‌ಮೆಂಟ್ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ್ದಾರೆ. ಹೀಗಾಗಿ 155 ಕಿ.ಮೀ.ಗಳಷ್ಟು ವೇಗದ ಎಸೆತಗಳನ್ನು ಯಾವುದೇ ಆತಂಕವಿಲ್ಲದೆ ಎದುರಿಸಲು ಸಾಧ್ಯವಾಗುತ್ತದೆ’ ಎಂದರು. “ಎಲ್ಲ ಆಟಗಾರರಲ್ಲೂ ದೌರ್ಬಲ್ಯಗಳಿರುತ್ತವೆ. ಹಾಗೆಯೇ ಆತಂಕವೂ ಮನೆಮಾಡಿ ರುತ್ತದೆ. ಅಭ್ಯಾಸದ ಅವಧಿಯಲ್ಲಿ ಇದನ್ನು ಹೋಗಲಾಡಿಸಬೇಕಾದುದು ಮುಖ್ಯ. ಈ ಕೆಲಸ ರಾಘವೇಂದ್ರ ಅವರಿಂದ ಆಗುತ್ತಿದೆ’ ಎಂದು ಕೊಹ್ಲಿ ಪ್ರಶಂಸಿಸಿದರು.
ನಿಮಿಷಕ್ಕೆ 4 ವೇಗದ ಎಸೆತಗಳನ್ನು ಹಾಕುವ ಸಾಮರ್ಥ್ಯ ರಾಘವೇಂದ್ರ ಅವರಿಗಿದೆ. ಇದರಲ್ಲಿ ಸ್ವಿಂಗ್, ರಿವರ್ಸ್ ಸ್ವಿಂಗ್ ಸೇರಿದಂತೆ ಎಲ್ಲ ವೆರೈಟಿಗಳೂ ಇರುತ್ತವೆ. ಗಾಯಾಳಾದ ಕಾರಣ ರಾಘವೇಂದ್ರ ಕ್ರಿಕೆಟ್ ಆಡುವುದರಿಂದ ದೂರ ಸರಿಯುವುದು ಅನಿವಾರ್ಯವಾಯಿತು. ಆದರೆ ಅವರ ಕನಸು ಇನ್ನೊಂದು ರೀತಿಯಲ್ಲಿ ಸಾಕಾರಗೊಂಡಿತು. ಈಗ ಟೀಮ್ ಇಂಡಿಯಾ ಪ್ರವಾಸ ಮಾಡುವಲ್ಲೆಲ್ಲ ರಾಘವೇಂದ್ರ ಕೂಡ ಜತೆಯಲ್ಲಿರುತ್ತಾರೆ.