Advertisement

ಚೀನಾ ಸೇನೆಗೆ ಭಾರತ ತಕ್ಕ ಪಾಠ ಕಲಿಸಿದೆ: ಸಂಸದ ತೇಜಸ್ವಿ ಸೂರ್ಯ

06:19 PM Mar 28, 2021 | Team Udayavani |

ಮೈಸೂರು: ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲುಆತ್ಮನಿರ್ಭರ ಭಾರತ ಯೋಜನೆಯಡಿ ಒತ್ತು ನೀಡಿದ್ದು, ರಕ್ಷಣಾಇಲಾಖೆಗೆ ಬೇಕಾದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಾಮಗ್ರಿಗಳನ್ನುಒದಗಿಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿಯುವ ಮೋರ್ಚಾದ ನಗರ ಹಾಗೂ ಗ್ರಾಮಾಂತರ ಘಟಕದಿಂದಆಯೋಜಿಸಿದ್ದ ಯೋಧ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿ, ಎಂತಹ ಸನ್ನಿವೇಶ ಎದುರಾದರೂ ತಕ್ಷಣವೇ ನಿರ್ಧಾರತೆಗೆದುಕೊಳ್ಳುವಂತಹ ಸ್ವಾತಂತ್ರ್ಯವನ್ನು ಪ್ರಧಾನಿ ನೀಡಿರುವ ಕಾರಣ,ಭಾರತವನ್ನು ಈಗ ಯಾವ ದೇಶವೂ ಕೆಣಕುವುದು ಅಷ್ಟು ಸುಲಭವಲ್ಲಎಂಬಂತಹ ಪರಿಸ್ಥಿತಿ ಇದೆ ಎಂದು ಹೇಳಿದರು.

1962ರಲ್ಲಿ ಭಾರತ-ಚೀನಾ ಯುದ್ಧ ನಡೆದಾಗ ಅಂದಿನ ಪ್ರಧಾನಿನೆಹರು ಅವರು ಹಿಂದು, ಚೀನಾ ಭಾಯೀ, ಭಾಯೀ ಎಂಬಭ್ರಮಾಲೋಕದಲ್ಲಿ ತೇಲುತ್ತಿದ್ದರು. ಸೈನಿಕರಿಗೆ ಯಾವುದೇ ನಿರ್ಧಾರಕೈಗೊಳ್ಳಲು ಸ್ವತಂತ್ರ್ಯವಿರಲಿಲ್ಲ. ಇದರಿಂದಾಗಿ ನಮ್ಮ ದೇಶದ ನೂರಾರುಎಕರೆ ಪ್ರದೇಶ ಚೀನಾದವರು ಅಕ್ರಮಿಸಿಕೊಂಡರು. ನೂರಾರು ಮಂದಿದೇಶದ ಸೈನಿಕರು ಯುದ್ಧದಲ್ಲಿ ಬಲಿಯಾದರು ಎಂದು ವಿವರಿಸಿದರು.ನೆಹರೂ ಅವರು ವಾಸ್ತವಿಕತೆ ಅರಿಯದೆ ಹೋಗಿದ್ದರಿಂದ ಅನೇಕಗಡಿ ಪ್ರದೇಶವನ್ನು ಚೀನಾ ಆಕ್ರಮಣ ಮಾಡಿಕೊಂಡಿತ್ತು.

ಒಂದು ವೇಳೆಚೀನಾದ ವಿರುದ್ಧ ಹೋರಾಟ ಮಾಡಿದ್ದರೆ ಭಾರತದ ಒಂದಿಂಚೂಭೂಮಿ ಅವರ ಬಳಿ ಇರುತ್ತಿಲ್ಲ. ದಶಕಗಳಿಂದ ಸೋಲು ಕಂಡುಆಘಾತವಾಗುತ್ತಿರಲಿಲ್ಲ. ಆರ್ಥಿಕ ಪರಿಸ್ಥಿತಿಯೂ ಕುಸಿಯುತ್ತಿರಲಿಲ್ಲಎಂದು ಲೇವಡಿ ಮಾಡಿದ ಅವರು, ಆದರೆ, ಈಗ ಭಾರತಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ ಡಾ.ಸಂದೀಪ್‌ಕುಮಾರ್‌ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನಾ ನಗರದ ರಾಮಸ್ವಾಮಿಸರ್ಕಲ್‌ನಿಂದ ಪಕ್ಷದ ಕಚೇರಿ ತನಕ ಬೈಕ್‌ ರ್ಯಾಲಿ ನಡೆಸುವ ಮೂಲಕತೇಜಸ್ವಿ ಸೂರ್ಯ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗಡೆ,ಜಿಲ್ಲಾಧ್ಯಕ್ಷ ಕಿರಣ್‌ ಗೌಡ, ಶಾಸಕ ಎಲ್‌.ನಾಗೇಂದ್ರ, ಮೈಸೂರುವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್‌, ಗ್ರಾಮಾಂತರ ಅಧ್ಯಕ್ಷೆಮಂಗಳ ಸೋಮಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next