ವಾಷಿಂಗ್ಟನ್/ಟೆಹ್ರಾನ್: “ನವೆಂಬರ್ ಬಳಿಕ ಇರಾನ್‌ನಿಂದ ಕಚ್ಚಾ ತೈಲ ಪೂರೈಕೆಯಾಗದಿದ್ದರೆ ಆತಂಕ ಬೇಡ. ನಮ್ಮ ಬಳಿ ಬಿ, ಸಿ, ಡಿ ಯೋಜನೆ ಸಿದ್ಧವಿದೆ.’ಹೀಗೆಂದು ಹೇಳಿದ್ದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ)ಅಧ್ಯಕ್ಷ ಸಂಜೀವ್ ಸಿಂಗ್.
“ಬ್ಲೂಮ್‌ಬರ್ಗ್’ ಗೆ ನೀಡಿದ ಸಂದರ್ಶನದಲ್ಲಿ ಮಾತ ನಾಡಿದ ಅವರು, ಸೌದಿ ಅರೇಬಿ ಯಾದಲ್ಲಿರುವ ಕಚ್ಚಾ ತೈಲ ನಿಕ್ಷೇಪಗಳು ವಿಶ್ವದ ತೈಲದ ಹೆಚ್ಚಿನ ಅಗತ್ಯವನ್ನು ಪೂರೈಸಲಿದೆ ಎಂದು ಹೇಳಿದ್ದಾರೆ. ಜತೆಗೆ, ದುಬೈನಿಂದ ಪೂರೈಕೆಯಾ ಗುವ ಕಚ್ಚಾ ತೈಲ ಭಾರತಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡಿವೆ ಎಂದೂ ಹೇಳಿದ್ದಾರೆ. ಇರಾನ್ ತೈಲ ಪೂರೈಕೆಗೆ ಟ್ರಂಪ್ ನಿರ್ಬಂಧ ಹೇರಿದರೆ ಭಾರತದ ಬಳಿ ಬಿ, ಸಿ, ಡಿ ಯೋಜನೆಗಳಿವೆ . ಪರಿಸ್ಥಿತಿ ಎದುರಿಸಲು ಸಿದ್ಧ. ಇರಾನ್‌ನಿಂದ ತೈಲ ಪೂರೈಕೆ ಸ್ಥಗಿತಗೊಂಡರೆ ಭಾರತಕ್ಕೆ ಯಾವುದೇ ತೊಂದರೆ ಆಗದು ಎಂದೂ ಹೇಳಿದ್ದಾರೆ.
ಪೂರೈಕೆಗೆ ಸಿದ್ಧ: ಸೌದಿ
ರಿಯಾದ್: ವಿಶ್ವ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸೌದಿ ಅರೇಬಿ ಯಾ ತಾನು ಹೊಂದಿರುವ ಹೆಚ್ಚುವರಿ ಕಚ್ಚಾ ತೈಲವನ್ನು ಪೂರೈಸಲು ಮುಂದಾ ಗಿದೆ. ಈ ಬಗ್ಗೆ ದೊರೆ ಸಲ್ಮಾನ್ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾ ಗಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸುವಂತೆ ಸೌದಿ ಆಡಳಿತಕ್ಕೆ ಮನವಿ ಮಾಡಿದ್ದರು.