Advertisement

ಸರಕಾರ ರಚನೆ ಪ್ರಯತ್ನ ಕೈಬಿಟ್ಟ ಐಎನ್‌ಡಿಐಎ

11:16 PM Jun 05, 2024 | Team Udayavani |

ಹೊಸದಿಲ್ಲಿ: “ಕಿಂಗ್‌ಮೇಕರ್‌’ಗಳಾದ ಟಿಡಿಪಿ ಮತ್ತು ಜೆಡಿಯು ವರಿಷ್ಠರು ಎನ್‌ಡಿಎಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರ ರಚಿಸುವ ಪ್ರಯತ್ನವನ್ನು ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಒಕ್ಕೂಟವು ಕೈಬಿಟ್ಟಿದ್ದು, ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದೆ.

Advertisement

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಬುಧವಾರ ನಡೆದ ಐಎನ್‌ಡಿಐಎ ಒಕ್ಕೂಟದ ನಾಯಕರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಎರಡು ತಾಸಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, “ಬಿಜೆಪಿ ಸರಕಾರ ಆಡಳಿತ ನಡೆಸಬಾರದು ಎಂಬ ಜನರ ಆಶಯವನ್ನು ಈಡೇರಿಸಲು ಐಎನ್‌ಡಿಐಎ ಒಕ್ಕೂಟವು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ’ ಎಂದು ಹೇಳಿದರು. ಇದೇ ವೇಳೆ ಅವರು ಸಭೆಯಲ್ಲಿ
ಚರ್ಚಿಸಿ ನಿರ್ಧಾರ ಕೈಗೊಳ್ಳಲಾದ ಹೇಳಿಕೆಯನ್ನು ಓದಿ ಹೇಳಿದರು. ಐಎನ್‌ಡಿಐಎ ಒಕ್ಕೂಟವನ್ನು ಯಾವುದೇ ಪಕ್ಷ ಯಾವುದೇ ಸಮಯದಲ್ಲಿ ಬೇಕಿದ್ದರೂ ಬಂದು ಸೇರಿಕೊಳ್ಳಬಹುದು ಎಂಬ ಮುಕ್ತ ಆಹ್ವಾನವನ್ನೂ ನೀಡಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ದಬ್ಟಾಳಿಕೆ ಆಡಳಿತದ ವಿರುದ್ಧ ವಿಪಕ್ಷ ನಾಯಕರು ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ನಾವು ಜತೆಯಾಗಿ ಕೆಲಸ ಮಾಡಲು ನಿರ್ಧರಿಸಿದ್ದು, ಚುನಾವಣೆ ಯಲ್ಲಿ ಜನರಿಗೆ ನೀಡಲಾದ ಭರವಸೆ ಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯ ದ್ವೇಷ, ಭ್ರಷ್ಟಾಚಾರ ಮತ್ತು ಒಡೆದಾಳುವ ನೀತಿಯ ವಿರುದ್ಧ ಜನರು ಮತಗಳ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಹಾಗಾಗಿ ಅವರನ್ನು ಐಎನ್‌ಡಿಐಎ ಒಕ್ಕೂಟವು ಅಭಿನಂದಿಸುತ್ತದೆ. ಭಾರತದ ಸಂವಿಧಾನ ರಕ್ಷಣೆ, ಬೆಲೆ ಏರಿಕೆ ಹಾಗೂ ನಿರುದ್ಯೋಗದ ವಿರುದ್ಧ, ಪ್ರಜಾಪ್ರಭುತ್ವ ರಕ್ಷಣೆ, ಬಂಡವಾಳ ಶಾಹಿಗಳ ವಿರುದ್ಧ ಜನರು ಫ‌ಲಿತಾಂಶ ನೀಡಿದ್ದಾರೆ. ಈ ಫ‌ಲಿತಾಂಶವು ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಜನರು ನೀಡಿರುವ ತೀರ್ಪು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.

Advertisement

ಐಎನ್‌ಡಿಐಎ ಸಭೆಯಲ್ಲಿ ಏನೇನಾಯಿತು?
-ಬಿಜೆಪಿ ಸರಕಾರದ ವಿರುದ್ಧ ಸೂಕ್ತ ಸಮಯ
ದಲ್ಲಿ ಸೂಕ್ತ ನಿರ್ಧಾರ
-ಪ್ರಚಾರ ವೇಳೆ ನೀಡಿದ್ದ ಭರವಸೆ ಈಡೇರಿಸಲು ಐಎನ್‌ಡಿಐಎ ಬದ್ಧ

Advertisement

Udayavani is now on Telegram. Click here to join our channel and stay updated with the latest news.

Next