Advertisement
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದ ಸಮಾರೋಪ ಸಮಾರಂಭದ ವೇದಿಕೆಯಲ್ಲಿದ್ದ ಬಹುತೇಕ ನಾಯಕರು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರಲ್ಲದೆ, ಬಿಜೆಪಿ ಹಠಾವೋ, ದೇಶ್ ಬಚಾವೋ ಘೋಷಣೆಗಳನ್ನು ಮೊಳಗಿಸಿದರು.
Related Articles
ಸಮಾವೇಶ ಅಲ್ಲ
ಸಚಿವ ಡಾ| ಎಚ್.ಸಿ. ಮಹದೇವಪ್ಪ ಮಾತನಾಡಿ, ಇದು ರಾಜಕೀಯ ಸಮಾವೇಶ ಅಲ್ಲ, ರಾಜಕಾರಣಿಗಳನ್ನು ಇಟ್ಟುಕೊಂಡು ನಡೆಸುತ್ತಿರುವ ಸಮಾವೇಶ ಅಲ್ಲ. ನಮ್ಮದು ಸಿಂಧು ಕಣಿವೆಯ ನಾಗರಿಕತೆ. ಪರಕೀಯರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದು, ಛಿದ್ರಗೊಂಡಿದ್ದ ದೇಶ, ಭಾಷೆ, ಧರ್ಮ, ಸಂಸ್ಕೃತಿಗಳನ್ನು ಒಗ್ಗೂಡಿಸಿ ಎಲ್ಲರಿಗೂ ಸಮಾನತೆ ಅವಕಾಶವನ್ನು ಸಂವಿಧಾನ ನೀಡಿದೆ ಎಂದು ಹೇಳಿದರು.
Advertisement
ವೈವಿಧ್ಯತೆಯಲ್ಲಿ ಏಕತೆ ಉಳಿಸಿಕೊಂಡ ಶ್ರೇಷ್ಠ ಸಂವಿಧಾನ ನಮ್ಮದು. ಈ ವಿಚಾರಗಳ ವಿರುದ್ಧ ಇರುವವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ದೇಶ ಕವಲುದಾರಿಯಲ್ಲಿದೆ. ಕೋಮುವಾದ, ಜಾತಿವಾದಗಳು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುತ್ತಿವೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನ ಜಾರಿ ಮಾಡುವ ಜಾಗದಲ್ಲಿ ಅದರ ವಿರೋಧಿಗಳಿದ್ದಾರೆ. ಯೋಗ್ಯರು, ಸಮರ್ಥರಿಗೆ ಎಚ್ಚರದಿಂದ ಮತದಾನ ಮಾಡಿ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ. ಪಾಟೀಲ್, ಮುನಿಯಪ್ಪ, ಕೆ.ಜೆ. ಜಾರ್ಜ್, ಬೋಸರಾಜು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ದಿಗ್ವಿಜಯ್ ಸಿಂಗ್, ಸಲ್ಮಾನ್ ಖುರ್ಷಿದ್, ಬಿ.ರಾಜಾರಾವ್, ಮನೋಜ್ ಭಟ್ಟಾಚಾರ್ಯ, ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ದೇಶ ನಮ್ಮೆಲ್ಲರದ್ದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾಷೆ, ಸಂಸ್ಕೃತಿ, ಹವಾಮಾನ ಎಲ್ಲದರಲ್ಲೂ ವಿವಿಧತೆ ಇದೆ. ನಮ್ಮನ್ನು ಒಂದು ಮಾಡಿ ಹೊಸ ಭಾರತ ಮಾಡಿರುವುದು ಬಾಬಾ ಸಾಹೇಬರ ಸಂವಿಧಾನ ಎಂಬುದನ್ನು ಒಪ್ಪಬೇಕು. ಇದನ್ನು ರಕ್ಷಿಸಿದರೆ ದೇಶ ಬಲಿಷ್ಠ ಆಗುತ್ತದೆ. ಧರ್ಮ ನಮ್ಮನ್ನು ಒಡೆಯುವುದಿಲ್ಲ, ಒಂದುಗೂಡಿಸುತ್ತದೆ. ನಮಗೆ ಬೇಕಿರುವುದೇ ಶಾಂತಿ, ಸೌಹಾರ್ದತೆ, ಮಕ್ಕಳ ಭವಿಷ್ಯ, ಉತ್ತಮ ಶಿಕ್ಷಣ, ಆರೋಗ್ಯ. ಕಾಶ್ಮೀರವು ಎಂದೆಂದಿಗೂ ಭಾರತದ ಭಾಗ.– ಫಾರೂಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಮಾಜಿ ಸಿಎಂ ನಾವು ಭಾರತವನ್ನು ಭವಿಷ್ಯದ ಬೆಳಕಿನೆಡೆಗೆ ಕೊಂಡೊಯ್ಯುತ್ತಿದ್ದರೆ, ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ ಸರಕಾರ ಮನುವಾದದ ಕಾಲಕ್ಕೆ ಕೊಂಡೊಯ್ಯುತ್ತಿದೆ. ಬಡತನ, ಹಸಿವು ಹೆಚ್ಚಿದೆ. ಆರ್ಥಿಕತೆ ಕೆಳಗೆ ಹೋಗಿದೆ. ಸಮುದ್ರಮಥನ ಕಾಲದಲ್ಲಿ ಅಮೃತವೂ ಬಂತು, ವಿಷವೂ ಬಂದಿತ್ತು. ಅಮೃತ ಕಾಲ ಎಂದು ಬಾಯಲ್ಲಿ ಹೇಳುವ ತಪ್ಪು ವ್ಯಕ್ತಿಗಳ ಕೈಯಲ್ಲಿ ಅಮೃತವಿದೆ. ಅದನ್ನು ಹಿಂಪಡೆದು, ಜನರ ಪಾಲಿನ ಅಮೃತ ಕಾಲ ಆಗುವಂತೆ ಮಾಡಬೇಕು.
– ಸೀತಾರಾಮ್ ಯೆಚೂರಿ, ಸಿಪಿಐ ಮುಖಂಡ