Advertisement

ಚೀನಾಕ್ಕೆ ಸಡ್ಡು: ಟಿಬೆಟ್‌ನ 30 ಸ್ಥಳಗಳ ಹೆಸರು ಬದಲಾವಣೆ ಮಾಡಿದ ಭಾರತ

11:44 PM Jun 11, 2024 | Team Udayavani |

ನವದೆಹಲಿ: ಅರುಣಾಚಲ ಪ್ರದೇಶ ತನ್ನದು ಎಂದು ಹೇಳಿಕೊಳ್ಳುತ್ತಿರುವ ಚೀನಾ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮಂಗಳವಾರ ಸರಿಯಾದ ತಿರುಗೇಟು ನೀಡಿದೆ. ಈಶಾನ್ಯ ರಾಜ್ಯದ ಹಲವು ಜಿಲ್ಲೆಗಳು ಮತ್ತು ಸ್ಥಳಗಳ ಹೆಸರುಗಳನ್ನು ಬದಲಿಸಿ ಚೀನಾ ತಕರಾರು ತೆಗೆಯುತ್ತಿತ್ತು. ಅದಕ್ಕೆ ತಿರುಗೇಟು ಎಂಬಂತೆ ಚೀನಾ ಆಕ್ರಮಿತ ಟಿಬೆಟ್‌ನ 30 ಸ್ಥಳಗಳ ಹೆಸರುಗಳನ್ನು ಕೇಂದ್ರ ಸರ್ಕಾರ ಬದಲಿಸಿದೆ. ಜತೆಗೆ ಶೀಘ್ರವೇ ಅದನ್ನೂ ವಾಸ್ತವಿಕ ನಿಯಂತ್ರಣ ರೇಖೆಯ ಗುಂಟ ಇರುವ ಪ್ರದೇಶಗಳಲ್ಲಿ ಭೂಸೇನೆ ಬಳಕೆ ಮಾಡುವ ಮ್ಯಾಪ್‌ಗ್ಳಿಗೆ ಅಪ್‌ಡೇಟ್‌ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

Advertisement

ಈ ಮೂಲಕ ಟಿಬೆಟ್‌ ನಮಗೆ ಸೇರಿದ್ದು ಎಂದು ಹೇಳಿಕೊಳ್ಳಲೂ ಮೋದಿ ನೇತೃತ್ವದ 3ನೇ ಅವಧಿಯಲ್ಲಿ ಹೇಳಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಮೂಲಕ ಪದೇ ಪದೆ ತಕರಾರು ತೆಗೆಯುತ್ತಿರುವ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಚೀನಾಕ್ಕೆ ವ್ಯೂಹಾತ್ಮಕವಾಗಿ ಬಿಸಿ ಮುಟ್ಟಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಅಂದ ಹಾಗೆ  ಮೋದಿ ನೇತೃತ್ವದ ಸರ್ಕಾರ ಹೆಸರು ಬದಲಾವಣೆಗೆ ಸಮ್ಮತಿ ಸೂಚಿಸಿತ್ತು.  ಚೀನಾ ಆಕ್ರಮಿತ ಟಿಬೆಟ್‌ನ 11 ವಸತಿ ಪ್ರದೇಶಗಳು, 12 ಪರ್ವತ ಪ್ರದೇಶಗಳು, ನಾಲ್ಕು ನದಿ, ಒಂದು ಸರೋವರ ಹಾಗೂ ಒಂದು ಪರ್ವತ ಮಾರ್ಗದ ಹೆಸರನ್ನು ಭಾರತ ಬದಲಿಸಲು ತೀರ್ಮಾನ ಕೈಗೊಂಡಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಬೆಳವಣಿಗೆಯಲ್ಲಿ ಚೀನಾ ಸರ್ಕಾರ ಅರುಣಾಚಲ ಪ್ರದೇಶದ 30 ಸ್ಥಳಗಳನ್ನು ಚೀನಾ ಹೆಸರಿನಿಂದ ಬದಲಿಸಿ ಅಪ್‌ಡೇಟ್‌ ಮಾಡಿತ್ತು. 2020ರ ಮೇ 5ರಂದು ಲಡಾಖ್‌ನಲ್ಲಿ ಸಂಘರ್ಷದ ಬಳಿಕ 2 ದೇಶಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next