Advertisement

Military ಯಂತ್ರಾಂಶದ ಉತ್ಪಾದನೆಗೆ ಭಾರತ-ಗ್ರೀಸ್‌ ಪರಸ್ಪರ ಸಹಕಾರ

12:15 AM Feb 22, 2024 | Team Udayavani |

ಹೊಸದಿಲ್ಲಿ: ಮಿಲಿಟರಿ ಯಂತ್ರಾಂಶದ ಉತ್ಪಾದನೆ ಮತ್ತು ಅಭಿವೃದ್ಧಿಗೆ ಒಟ್ಟಿಗೆ ಕೆಲಸ ಮಾಡಲು ಭಾರತ ಮತ್ತು ಗ್ರೀಸ್‌ ಒಪ್ಪಿವೆ. ಶೀಘ್ರದಲ್ಲೇ ಮೊಬಿಲಿಟಿ ಮತ್ತು ವಲಸೆ ಒಪ್ಪಂದವನ್ನು ದೃಢೀಕರಿಸಲು ನಿರ್ಧರಿಸಿವೆ.

Advertisement

2 ದಿನಗಳ ಭೇಟಿಗಾಗಿ ಭಾರ ತಕ್ಕೆ ಆಗಮಿಸಿರುವ ಗ್ರೀಸ್‌ ಪ್ರಧಾನಿ ಕಿರಿಯಾಕೋಸ್‌ ಮಿಟೊÕàಟಾಕಿಸ್‌ ಅವರು ಬುಧವಾರ ಪ್ರಧಾನಿ ಮೋದಿ ಅವರೊಂ ದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ವಿಶ್ವಕ್ಕೆ ಮಾರಕವಾಗಿರುವ ಉಗ್ರವಾದ ವಿರುದ್ಧ ಜಂಟಿಯಾಗಿ ಸೆಣಸಲು, ಉಗ್ರ ವಿರೋಧಿ ಹೋರಾಟದಲ್ಲಿ ಪರಸ್ಪರ ಸಹಕಾರ, ಅಲ್ಲದೇ ಫಾರ್ಮಾ, ವೈದ್ಯಕೀಯ ಉಪಕರಣಗಳು, ತಂತ್ರಜ್ಞಾನ, ಆವಿಷ್ಕಾರ, ಕೃಷಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಭಾಗಿತ್ವ ಹೆಚ್ಚಿಸಲು ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next