ಹೊಸದಿಲ್ಲಿ: ಜಮ್ಮು ಕಾಶ್ಮೀರ ಗಡಿಯಲ್ಲಿ ಪಾಕಿಸ್ಥಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಪಾಕಿಸ್ಥಾನ ರಾಯಭಾರಿಗೆ ಭಾರತ ಸಮನ್ಸ್ ನೀಡಿದೆ.
ಶುಕ್ರವಾರ ಭಾರತದ ಪಾಕ್ ನಲ್ಲಿರುವ ಬಂಕರ್ ಗಳನ್ನು ಸ್ಪೋಟಿಸಿದ ನಂತರ ಭಾರತದ ರಾಯಭಾರಿಗೆ ಪಾಕ್ ಸಮನ್ಸ್ ನೀಡಿತ್ತು. ಇದಾದ ಬೆನ್ನಲ್ಲೇ ಭಾರತವೂ ಪಾಕ್ ಹೈಕಮಿಷನ್ ನ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡು ಕದನ ವಿರಾಮ ಉಲ್ಲಂಘನೆಯ ಬಗ್ಗೆ ವಿಚಾರಣೆ ನಡೆಸಿದೆ.
ಹಬ್ಬದ ಸಂದರ್ಭವನ್ನೇ ಆಯ್ಕೆ ಮಾಡಿಕೊಂಡು ಪಾಕಿಸ್ತಾನವು ಅಮಾಯಕ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಹೇಳಿದೆ.
ಇದನ್ನೂ ಓದಿ:ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ: ಡಿಪ್ಲೊಮಾ ಕಲಿತವರಿಗೆ ಉದ್ಯೋಗ ಮಾಹಿತಿ
ಜಮ್ಮು ಕಾಶ್ಮೀರ ಗಡಿ ಭಾಗದಲ್ಲಿ ಪಾಕಿಸ್ಥಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ, ಭಾರತದ ಮೇಲೆ ಶೆಲ್ಲಿಂಗ್ ನಡೆಸುತ್ತಿದೆ. ಶುಕ್ರವಾರವೂ ಗುಂಡಿನ ದಾಳಿ ನಡೆಸಿದ್ದು, ಭಾರತದ ಐವರು ಸೈನಿಕರು ಮತ್ತು 10 ಮಂದಿ ನಾಗರಿಕರು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಭಾರತ ಗಡಿಯಲ್ಲಿರುವ ಪಾಕ್ ಬಂಕರ್ ಗಳನ್ನು ಧ್ವಂಸ ಮಾಡಿತ್ತು.