Advertisement

ವೆಸ್ಟ್‌ ಇಂಡೀಸ್‌ ಗೆಲುವಿಗೆ 280 ರನ್ ಟಾರ್ಗೆಟ್ ನೀಡಿದ ಭಾರತ

10:28 AM Aug 13, 2019 | Team Udayavani |

ಪೋರ್ಟ್‌ ಆಫ್ ಸ್ಪೇನ್‌:ವೆಸ್ಟ್‌ ಇಂಡೀಸ್‌ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿದೆ.

Advertisement

ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಕ್ರಮವಾಗಿ ವಿರಾಟ್ ಕೊಹ್ಲಿ 120, ಶ್ರೇಯಸ್ ಅಯ್ಯರ್ 71,  ರೋಹಿತ್ ಶರ್ಮ 18, ರಿಷಬ್ ಪಂತ್ 20, ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜ ಸಮನಾಗಿ 16 ರನ್ ಗಳನ್ನು ಕಲೆಹಾಕಿದರು.

ಮೊದಲ ಓವರಿನಲ್ಲೇ ಬ್ಯಾಟ್‌ ಹಿಡಿದು ಬಂದ ವಿರಾಟ್‌ ಕೊಹ್ಲಿ ಅತ್ಯಂತ ಜವಾಬ್ದಾರಿಯುತ ಆಟವಾಡಿದರು. ವಿಂಡೀಸ್‌ ಬೌಲರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ರನ್‌ ಪೇರಿಸುತ್ತ “ಕ್ವೀನ್ಸ್‌ ಪಾರ್ಕ್‌’ನಲ್ಲಿ ಮೆರೆದಾಡಿದರು. ಇದರೊಂದಿಗೆ ಕೊಹ್ಲಿ ಅತ್ಯಧಿಕ 3 ತಂಡಗಳ ವಿರುದ್ಧ 8 ಶತಕ ಬಾರಿಸಿದಂತಾಯಿತು.

ಭಾರತ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಲು ನಿರ್ಧರಿಸಿತ್ತು. ಆದರೆ ಶಿಖರ್‌ ಧವನ್‌ ಕೇವಲ 2 ರನ್‌ ಮಾಡಿ ಮೊದಲ ಓವರಿನಲ್ಲೇ ಕಾಟ್ರೆಲ್‌ ಬಲೆಗೆ ಬಿದ್ದರು. ರೋಹಿತ್‌ ಶರ್ಮ 16ನೇ ಓವರ್‌ ತನಕ ಕ್ರೀಸಿನಲ್ಲಿ ಉಳಿದರೂ ಗಳಿಸಿದ್ದು 18 ರನ್‌ ಮಾತ್ರ (34 ಎಸೆತ, 2 ಬೌಂಡರಿ). 4ನೇ ಕ್ರಮಾಂಕದಲ್ಲಿ ಆಡಲಿಳಿದ ರಿಷಭ್‌ ಪಂತ್‌ 35 ಎಸೆತ ಎದುರಿಸಿ 20 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next