Advertisement
1990ರಲ್ಲಿ ಭಾರತೀಯರ ಆಯುಸ್ಸು 59.6 ವರ್ಷಗಳಿತ್ತು. ಆದರೆ ಈಗ 70.8 ವರ್ಷಗಳಿಗೆ ಏರಿಕೆಯಾಗಿದೆ. ಇದರಲ್ಲಿ ಕೇರಳದವರ ಜೀವಿತಾವಧಿಯೇ ಹೆಚ್ಚಳ. ಇಲ್ಲಿನ ಜನರು 77.3 ವರ್ಷಗಳ ಕಾಲ ಬದುಕಿದರೆ, ಉತ್ತರ ಪ್ರದೇಶದ ಮಂದಿ 66.9 ವರ್ಷಗಳ ಕಾಲ ಬದುಕುತ್ತಾರೆ.
ಭಾರತೀಯರ ಆಯುಸ್ಸು ಹೆಚ್ಚಾಗಿದೆ ಎಂದರೆ ನಾವು ರೋಗಗಳನ್ನು ಗೆದ್ದಿದ್ದೇವೆ ಎಂದರ್ಥವಲ್ಲ. ಭಾರತೀಯರು ರೋಗಗಳ ಜತೆಗೇ ವಾಸಿಸುವುದನ್ನು ಕಲಿತಿದ್ದಾರೆ ಎಂಬ ಅಂಶವನ್ನೂ ಈ ಅಧ್ಯಯನ ವರದಿ ತಿಳಿಸಿದೆ.
Related Articles
ಲ್ಯಾನ್ಸೆಟ್‌ನ ಅಧ್ಯಯನದ ಪ್ರಕಾರ ಇಡೀ ಜಗತ್ತಿನ ಮಂದಿ 286 ರೋಗಗಳಿಂದ ಸಾಯುತ್ತಾರೆ. ಜತೆಗೆ 369 ರೋಗಗಳು ಮತ್ತು ಗಾಯಗಳು ಜನರಿಗೆ ಕಷ್ಟಕೊಡುತ್ತಿವೆ. ಭಾರತದಲ್ಲಿ ಸಾಂಕ್ರಾಮಿಕ ರೋಗಗಳಿಂದ ಸಾಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಮರಣಾಂತಿಕ ಅಥವಾ ಗಂಭೀರ ರೋಗಗಳಾದ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ರೋಗಗಳು, ಪಾರ್ಶ್ವವಾಯು ಸಹಿತ ಇತರ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.
Advertisement
ನಿಯಂತ್ರಿಸಬಲ್ಲ ರೋಗ1990ರಿಂದ 2019ರ ವರೆಗಿನ ಅವಧಿಯಲ್ಲಿ ಭಾರತ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಗಣನೀಯ ಪಾತ್ರ ವಹಿಸಿದೆ. ಆದರೂ ದೇಶದ ಆರೋಗ್ಯ ವಲಯ ಇನ್ನೂ ಚೇತರಿಸಿಕೊಳ್ಳಬೇಕು ಎಂದು ಈ ವರದಿ ರೂಪಿಸಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಭಾರತದಲ್ಲಿ ಹೆರಿಗೆ ವೇಳೆಯ ಮರಣ ಪ್ರಮಾಣ ಹೆಚ್ಚಾಗಿಯೇ ಇತ್ತು. ಆದರೆ ಈಗ ಇದು ತೀರಾ ಕಡಿಮೆಯಾಗಿದೆ. ಆದರೆ ಹೃದಯ ಸಂಬಂಧಿ ರೋಗಗಳ ಬಾಧಿಸುವಿಕೆ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಜತೆಗೆ ಭಾರತದ ಮಟ್ಟಿಗೆ ಪಟ್ಟಿ ಮಾಡಿರುವ ಐದು ಪ್ರಮುಖ ಅಪಾಯಗಳನ್ನೂ ನಿಯಂತ್ರಿಸಬಹುದಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.