Advertisement
ಇತ್ತೀಚೆಗೆ ಅಹ್ಮದಾಬಾದ್‌ನಲ್ಲಿ ನಡೆದ “ಇಂಟರ್ ಕಾಂಟಿನೆಂಟಲ್ ಕಪ್’ ಕೂಟದಲ್ಲಿ ತಜಿಕಿಸ್ಥಾನ್ ಮತ್ತು ಕೊರಿಯಾ ವಿರುದ್ಧದ ಪಂದ್ಯಗಳಲ್ಲಿ ಸೋಲನುಭವಿಸಿದ ಭಾರತ, ಸಿರಿಯಾ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದು ರ್‍ಯಾಂಕಿಂಗ್ ಕುಸಿತಕ್ಕೆ ಪ್ರಮುಖ ಕಾರಣ. ಏಶ್ಯನ್ ರಾಷ್ಟ್ರಗಳಲ್ಲಿ ಭಾರತ 18ನೇ ಸ್ಥಾನದಲ್ಲಿದೆ.ಭಾರತ 5 ಅಂಕ ಕಳೆದುಕೊಂಡಿದ್ದು, 1,214 ರ್‍ಯಾಂಕಿಂಗ್ ಅಂಕಗಳನ್ನು ಹೊಂದಿದೆ. ಬೆಲ್ಜಿಯಂ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಬ್ರಝಿಲ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಉರುಗ್ವೆ 2ರಿಂದ 5ರ ವರೆಗಿನ ಸ್ಥಾನದಲ್ಲಿವೆ.