Advertisement
ದೇಶದಲ್ಲಿ ಹೊಸದಾಗಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಿದರೆ, ಒಟ್ಟಾರೆ ಯೋಜನಾ ವೆಚ್ಚದ ಶೇ.50ರಷ್ಟನ್ನು ಸರ್ಕಾರವೇ ಭರಿಸುವುದಾಗಿ ಘೋಷಿಸಿದೆ. ಈ ಪ್ರಸ್ತಾಪಕ್ಕೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯ ಅನುಮೋದನೆಯೂ ಸಿಕ್ಕಿದೆ.
Related Articles
Advertisement
ಸರಕು ಸಾಗಣೆ ನೀತಿಗೆ ಅಸ್ತು:ಇದೇ ವೇಳೆ, ಸರಕು ಸಾಗಣೆ ಕ್ಷೇತ್ರದ ಜಾಗತಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ, ಸಾಗಣೆ ವೆಚ್ಚ ತಗ್ಗಿಸುವ ಮತ್ತು ಸರಕುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ರಾಷ್ಟ್ರೀಯ ಸರಕು ಸಾಗಣೆ ನೀತಿಗೂ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಪ್ರಧಾನಿ ಮೋದಿ ಅವರು ಈ ನೀತಿಯನ್ನು ಅನಾವರಣಗೊಳಿಸಿದ್ದರು. ಇನ್ನು, ಸೋಲಾರ್ ಪಿವಿ ಮಾಡ್ನೂಲ್‌ಗಳ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 19,500 ಕೋಟಿ ರೂ.ಗಳ ಉತ್ಪಾದನೆ ಆಧರಿತ ಪ್ರೋತ್ಸಾಹ ಧನ ಯೋಜನೆಗೂ ಸಂಪುಟದ ಅನುಮತಿ ದೊರೆತಿದೆ. ಯಾವುದಕ್ಕೆ ಚಿಪ್ ಬಳಕೆ?
ಸ್ಮಾರ್ಟ್‌ಫೋನುಗಳು ಹಾಗೂ ವಿದ್ಯುತ್‌ಚಾಲಿತ ಕಾರುಗಳಲ್ಲಿ ಹೆಚ್ಚಾಗಿ ಚಿಪ್ ಗಳನ್ನು ಬಳಸಲಾಗುತ್ತಿದೆ. ಈ ಎರಡೂ ಉತ್ಪನ್ನಗಳಿಗೆ ಇತ್ತೀಚಿನ ವರ್ಷಗಳಲ್ಲಿ ವಿಶ್ವಾದ್ಯಂತ ಭಾರೀ ಬೇಡಿಕೆಯಿದೆ. 2022ರ 2ನೇ ತ್ತೈಮಾಸಿಕದಲ್ಲಿ 152.5 ಶತಕೋಟಿ ಡಾಲರ್ ಮೊತ್ತದ ಸೆಮಿಕಂಡಕ್ಟರ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ.13.3ರಷ್ಟು ಏರಿಕೆ ಕಂಡಂತಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಭಾರತವನ್ನು ಚಿಪ್ ಉತ್ಪಾದನಾ ಹಬ್ ಆಗಿ ಪರಿವರ್ತಿಸುವುದು ಕೇಂದ್ರ ಸರ್ಕಾರದ ಉದ್ದೇಶ. ಅನುಕೂಲಗಳೇನು?
– 5ಜಿ, ಇವಿ, ಕೃತಕ ಬುದ್ಧಿಮತ್ತೆಗೆ ಅಗತ್ಯವಾದ ಚಿಪ್ ಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು
– ಅತಿ ವೇಗದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಉತ್ತೇಜನ
– ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನಾ ಹಬ್ ಆಗಿ ಹೊರಹೊಮ್ಮಬಹುದು
– ದೇಶೀಯವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿ
– ಚಿಪ್ ಗಳಿಗಾಗಿ ತೈವಾನ್, ಚೀನಾ, ದ.ಕೊರಿಯಾವನ್ನು ಅವಲಂಬಿಸುವ ಅಗತ್ಯ ಇರುವುದಿಲ್ಲ