Advertisement

Soldier; ಇಸ್ರೇಲ್‌ನಲ್ಲಿ ಗಾಯಗೊಂಡ ಸೈನಿಕ ಭಾರತಕ್ಕೆ ಸ್ಥಳಾಂತರ

09:17 PM Sep 26, 2024 | Team Udayavani |

ಹೊಸದಿಲ್ಲಿ: ಇಸ್ರೇಲ್ ಪಡೆಗಳು ಲೆಬನಾನ್‌ನಲ್ಲಿ ನೆಲದ ಆಕ್ರಮಣಕ್ಕೆ ಸಿದ್ಧವಾಗುತ್ತಿದ್ದಂತೆ, ಭಾರತ ಗುರುವಾರ ಗಾಯಗೊಂಡ ಭಾರತೀಯ ಸೈನಿಕನನ್ನು ಟೆಲ್ ಅವಿವ್‌ನಿಂದ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹೊಸದಿಲ್ಲಿಯ ಸೇನಾ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿದಿದ್ದಾರೆ. ಈ ಪ್ರಕರಣವು ಲೆಬನಾನ್‌ನಲ್ಲಿ ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Advertisement

ಗೋಲನ್ ಹೈಟ್ಸ್‌ನಲ್ಲಿ ವಿಶ್ವಸಂಸ್ಥೆಯ(UN) ಡಿಸ್‌ಎಂಗೇಜ್‌ಮೆಂಟ್ ಅಬ್ಸರ್ವರ್ ಫೋರ್ಸ್ (UNDOF) ಪಡೆಗಳೊಂದಿಗೆ ಸೇವೆ ಸಲ್ಲಿಸುತ್ತಿದ್ದ ಯೋಧ ಹವಾಲ್ದಾರ್ ಸುರೇಶ್ ಆರ್ (33) ಅವರಿಗೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿತ್ತು. UNDOF ಆದೇಶದ ಪ್ರಕಾರ ಪಡೆಗಳಿಗೆ ಇಸ್ರೇಲ್ ಮತ್ತು ಸಿರಿಯಾ ನಡುವೆ ಕದನ ವಿರಾಮವನ್ನು ನಿರ್ವಹಿಸುವುದು ಮತ್ತು ಇಸ್ರೇಲಿ ಮತ್ತು ಸಿರಿಯನ್ ಪಡೆಗಳ ನಿರ್ಗಮನದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವುದಾಗಿತ್ತು.

ಯೋಧ ಹವಾಲ್ದಾರ್ ಸುರೇಶ್ ಆರ್ ಅವರನ್ನು C-130J ಏರ್ ಆಂಬುಲೆನ್ಸ್‌ನಲ್ಲಿ ಭಾರತಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next