Advertisement

ಸೋಲಿನ ಸುಳಿ ತಪ್ಪಿಸಲು ಭಾರತದ ಮೇಲಿದೆ ಒತ್ತಡ

12:30 AM Mar 07, 2019 | Team Udayavani |

ಗುವಾಹಟಿ: ಇಂಗ್ಲೆಂಡ್‌ ವಿರುದ್ಧದ ದ್ವಿತೀಯ ಟಿ20 ಪಂದ್ಯಕ್ಕೆ ಭಾರತದ ವನಿತಾ ತಂಡ ಸಜ್ಜಾಗಿದೆ. ಆದರೆ, ಭಾರತದ ವನಿತಾ ತಂಡದ ಮೇಲೆ‌ ಟಿ20 ಸೋಲಿನ ಸುಳಿಯಿಂದ ಹೊರಬರಬೇಕಾದ ಒತ್ತಡವಿದೆ.

Advertisement

ಗುರುವಾರ ಇಲ್ಲಿನ ಬಸ್ರಾಪುರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಈ ಪಂದ್ಯಕ್ಕೆ ವೇದಿಕೆ ಸಿದ್ದವಾಗಿದೆ. ಭಾರತ ಮೊದಲ ಗೆಲುವಿಗಾಗಿ ಕಾಯುತ್ತಿದ್ದರೆ, ಏಕದಿನ ಸರಣಿ ಸೋಲಿನ ಸೇಡನ್ನು ಈ ಸರಣಿಯಲ್ಲಿ ತೀರಿಸಿಕೊಳ್ಳುವ ವಿಶ್ವಾಸ ಇಂಗ್ಲೆಂಡ್‌ ತಂಡದಲ್ಲಿದೆ.

3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 41 ರನ್‌ಗಳ ಹೀನಾಯ ಸೋಲುನುಭವಿಸಿತ್ತು. ಇದು ಚುಟುಕು ವಿಭಾಗದಲ್ಲಿ ಭಾರತಕ್ಕೆ ಸತತ 5ನೇ ಸೋಲು.  2018ರ ಕೊನೆಯ ಪಂದ್ಯದ ಸೋಲಿನ ಜತೆಗೆ, ಈ ವರ್ಷದ 4 ಟಿ20 ಪಂದ್ಯಗಳಲ್ಲಿಯೂ ಭಾರತ ಗೆಲುವು ಕಂಡಿಲ್ಲ.

ಹೀಗಾಗಿ ಸ್ಮತಿ ಮಂಧನಾ ಪಡೆಗೆ ಈ ಪಂದ್ಯ ಮಹತ್ತರವಾದುದು. ಸೋಲಿನ ಸುಳಿಯಿಂದ ಭಾರತ ತಪ್ಪಿಸಿಕೊಳ್ಳುತ್ತದೆಯೇ ಎಂಬುದು ಸದ್ಯದ ನಿರೀಕ್ಷೆ.ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗ್ೂ ಮುನ್ನ ಸಮರ್ಥ ತಂಡವನ್ನು ಕಟ್ಟುವ ಹೊಣೆಗಾರಿಕೆ ನೂತನ ಕೋಚ್‌ ಡಬ್ಲ್ಯು. ವಿ. ರಾಮನ್‌ ಅವರ ಮೇಲಿದೆ. ಹೀಗಾಗಿ ಈ ಸರಣಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕಾದ ಅನಿರ್ವಾಯತೆ ಇದೆ.

ನ್ಯೂಜಿಲ್ಯಾಂಡ್‌ ಸರಣಿ ಪುನರಾವರ್ತನೆ?
ಇಂಗ್ಲೆಂಡ್‌ ಪ್ರವಾಸ ಭಾರತಕ್ಕೆ ಬರುವ ಮುನ್ನ ಭಾರತ ತಂಡ ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಗಾಗಿ ಪ್ರವಾಸ ಕೈಗೊಂಡಿತ್ತು. ಅಲ್ಲಿ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಕೈವಶ ಮಾಡಿಕೊಂಡ, 3 ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್‌ವಾಶ್‌ ಆಗಿ ವಾಪಸಾಗಿತ್ತು. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿಯೂ ಭಾರತ ಇದೇ ದಾರಿಯಲ್ಲಿ ಸಾಗುತ್ತಿದೆ. ಏಕದಿನ ಸರಣಿ ಕೈವಶ ಮಾಡಿಕೊಂಡ ಭಾರತ ಮೊದಲ ಟಿ20 ಪಂದ್ಯದಲ್ಲಿ ಸೋತಿದೆ. ದ್ವಿತೀಯ ಪಂದ್ಯದಲ್ಲೂ ಸೋತರೆ ನ್ಯೂಜಿಲ್ಯಾಂಡ್‌ ಸರಣಿ ಪುನರಾವರ್ತನೆಯಾಗುವ ಸಾಧ್ಯತೆ ದಟ್ಟವಾಗಿದೆ.

Advertisement

ಬ್ಯಾಟಿಂಗ್‌ ವೈಫ‌ಲ್ಯ
ಮೊದಲ ಟಿ20 ಪಂದ್ಯದಲ್ಲಿ 160 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಭಾರತ ಬ್ಯಾಟಿಂಗ್‌ ವೈಫ‌ಲ್ಯ ಕಂಡಿತ್ತು. ಏಕದಿನ ಸರಣಿ ಗೆಲುವಿಗೆ ಕಾರಣರಾಗಿದ್ದ ಜೆಮಿಮಾ ರೋಡ್ರಿಗಸ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ಟಿ20 ನಾಯಕತ್ವ ವಹಿಸಿಕೊಂಡ ಸ್ಮತಿ ಮಂಧನಾ ಕ್ಲಿಕ್‌ ಅಗಿಲ್ಲ. ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಟಿ20 ಕ್ಯಾಪ್‌ ತೊಟ್ಟ ಹಲೀìನ್‌ ಡಿಯೋಲ್‌, ನ್ಯೂಜಿಲ್ಯಾಂಡ್‌ ಟಿ20 ಸರಣಿಯಿಂದ ಹೊರಗುಳಿದು, ಈ ಬಾರಿ ತಂಡಕ್ಕೆ ಮರಳಿದ ನಿರೀಕ್ಷೆ ಹುಟ್ಟಿಸಿದ್ದ ಮಿಥಾಲಿ ರಾಜ್‌ ವೈಫ‌ಲ್ಯ ಭಾರತಕ್ಕೆ ಮುಳುವಾಗಿ ಪರಿಣಮಿಸಿದೆ. ದ್ವಿತೀಯ ಪಂದ್ಯದಲ್ಲಿ ಇವರೆಲ್ಲರ ಪ್ರದರ್ಶನ ಸುಧಾರಿಸಿದರೆ ಗೆಲುವಿನ ನಗೆ ಬೀರಲೂಬಹುದು.

ಬೌಲಿಂಗ್‌ ವಿಭಾಗವೂ ದುರ್ಬಲ
ಬ್ಯಾಟಿಂಗ್‌ ವಿಭಾಗದಂತೆ ಭಾರತದ ಬೌಲಿಂಗ್‌ ವಿಭಾಗವೂ  ದುರ್ಬಲವಾಗಿದೆ. ದೀಪ್ತಿ, ಅರುಂಧತಿ ಹಾಗೂ ರಾಧಾ ಯಾದವ್‌ ಯಥೇತ್ಛವಾಗಿ ರನ್‌ ಬಿಟ್ಟುಕೊಟ್ಟು ದುಬಾರಿಯಾದರೆ, ಮಧ್ಯಮ ವೇಗಿ ಶಿಖಾ ಪಾಂಡೆ, ಲೆಗ್‌ ಸ್ಪಿನ್ನರ್‌ ಪೂನಮ್‌ ಯಾದವ್‌ ವಿಫ‌ಲರಾಗಿದ್ದರು. ಈ ಪಂದ್ಯದಲ್ಲಿ ಬೌಲಿಂಗ್‌ ವಿಭಾಗದ ಸಂಘಟಿತ ಪ್ರದರ್ಶನ ಅಗತ್ಯವಿದೆ.

ಇಂಗ್ಲೆಂಡ್‌ ಬಲಿಷ್ಠ
ಇತ್ತ ಇಂಗ್ಲೆಂಡ್‌ ಟಾಮಿ ಬೇಮಂಟ್‌, ನಾಯಕಿ ಹೀತರ್‌ ನೈಟ್‌, ಡೇನಿಯಲ್‌ ವ್ಯಾಟ್‌ ಬ್ಯಾಟಿಂಗ್‌ ಬಲವಾದರೆ, ಬೌಲಿಂಗ್‌ನಲ್ಲಿ ಕ್ಯಾಥೇರಿನ್‌ ಬ್ರಂಟ್‌, ಅನ್ಯಾ ಶ್ರಬೋಲ್ಸ್‌, ಲಿನ್ಸೆ ಸ್ಮಿತ್‌ ಭಾರತಕ್ಕೆ ಆಘಾತ ತಂದೊಡ್ಡಲು ಸಿದ್ದರಾಗಿದ್ದಾರೆ.

ಸಂಭಾವ್ಯ ತಂಡಗಳು
ಭಾರತ
: ಸ್ಮತಿ ಮಂಧನಾ (ನಾಯಕಿ), ಜೆಮಿಮಾ ರೋಡ್ರಿಗಸ್‌,  ಮಿಥಾಲಿ ರಾಜ್‌, ದೀಪ್ತಿ ಶರ್ಮ, ತನಿಯಾ ಭಾಟಿಯ, ಭಾರತಿ ಫ‌ುಲ್ಮಾಲಿ, ಅನುಜಾ ಪಾಟೀಲ್‌, ಶಿಖಾ ಪಾಂಡೆ, ಕೋಮಲ್‌ ಜಂಜಾದ್‌, ಅರುಂಧತಿ ರೆಡ್ಡಿ, ಪೂನಮ್‌ ಯಾದವ್‌, ಏಕ್ತಾ ಬಿಷ್ಟ್, ರಾಧಾ ಯಾದವ್‌, ವೇದಾ ಕೃಷ್ಣಮೂರ್ತಿ, ಹರ್ಲಿನ್‌ ಡಿಯೋಲ್‌

ಇಂಗ್ಲೆಂಡ್‌: ಹೀಥರ್‌ ನೈಟ್‌ (ನಾಯಕಿ), ಟಾಮಿ ಬೇಮಂಟ್‌, ಕ್ಯಾಥರಿನ್‌ ಬ್ರಂಟ್‌, ಕೇಟ್‌ ಕ್ರಾಸ್‌, ಸೋಫಿಯಾ ಡಂಕ್ಲಿ, ಫ್ರೆಯಾ ಡೆವಿಸ್‌, ಜಾರ್ಜಿಯಾ ಎಲ್ವಿಸ್‌, ಎಲೆಕ್ಸ್‌ ಹಾಟಿÉì, ಆ್ಯಮಿ ಜೋನ್ಸ್‌, ಲಾರಾ ಮಾರ್ಷ್‌, ನಥಾಲಿ ಶಿವರ್‌, ಅನ್ಯಾ ಶ್ರಬೋಲ್ಸ್‌, ಸಾರಾ ಟಯ್ಲರ್‌, ಡೇನಿಯಲ್‌ ವ್ಯಾಟ್‌, ಲಾರೆನ್‌ ವಿನ್‌ಫೀಲ್ಡ್‌.

Advertisement

Udayavani is now on Telegram. Click here to join our channel and stay updated with the latest news.

Next