Advertisement

ವಿಶ್ವ ಫ‌ುಟ್‌ಬಾಲ್‌ ರ್‍ಯಾಂಕಿಂಗ್‌ 106ನೇ ಸ್ಥಾನಕ್ಕೆ ಕುಸಿದ ಭಾರತ

10:28 PM Oct 24, 2019 | Team Udayavani |

ಹೊಸದಿಲ್ಲಿ: ಭಾರತ ಫ‌ುಟ್‌ಬಾಲ್‌ ತಂಡ ವಿಶ್ವ ಶ್ರೇಯಾಂಕದಲ್ಲಿ 2 ಸ್ಥಾನ ಕುಸಿತ ಕಂಡಿದೆ. 104ನೇ ಸ್ಥಾನದಲ್ಲಿದ್ದ ಭಾರತ 106ಕ್ಕೆ ಇಳಿದಿದೆ.

Advertisement

ಕತಾರ್‌ನಲ್ಲಿ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ತನಗಿಂತ ಕೆಳ ರ್‍ಯಾಂಕಿಂಗ್‌ನ ಬಾಂಗ್ಲಾದೇಶ ವಿರುದ್ಧ ಡ್ರಾ ಸಾಧಿಸಿದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಆದರೆ ಇದರ ಲಾಭವೆತ್ತಿದ ಬಾಂಗ್ಲಾದೇಶ 3 ಸ್ಥಾನಗಳ ಏರಿಕೆ ಕಂಡು 184ನೇ ಸ್ಥಾನ ಪಡೆದಿದೆ.

ಬೆಲ್ಜಿಯಂ ಅಗ್ರಸ್ಥಾನ ಕಾಯ್ದು ಕೊಂಡಿದೆ. ಫ್ರಾನ್ಸ್‌ ಮತ್ತು ಬ್ರಝಿಲ್‌ ಅನಂತರದ ಸ್ಥಾನದಲ್ಲಿವೆ. ಇಂಗ್ಲೆಂಡ್‌ ನಾಲ್ಕರಲ್ಲಿದೆ. ಉರುಗ್ವೆ (5), ಕ್ರೊವೇಶಿಯಾ (7) ಮತ್ತು ಆರ್ಜೆಂಟೀನಾ (9) ಒಂದೊಂದು ಸ್ಥಾನದ ಪ್ರಗತಿ ಕಂಡ ಟಾಪ್‌-10 ಯಾದಿಯ ತಂಡಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next