Advertisement

ಭಾರತದಿಂದ ಇಡೀ ಚೀನ ನಾಶಗೈವ ಅಣ್ವಸ್ತ್ರ ಕ್ಷಿಪಣಿ : ಅಮೆರಿಕ ಪರಿಣತರು

03:25 PM Jul 13, 2017 | Team Udayavani |

ಹೊಸದಿಲ್ಲಿ : ದಕ್ಷಿಣ ಭಾರತದಲ್ಲಿನ ತನ್ನ ನೆಲೆಗಳಿಂದ ಚೀನದಲ್ಲಿನ ಎಲ್ಲ ಗುರಿಗಳನ್ನು ಧ್ವಂಸ ಮಾಡುವ ಅತ್ಯಂತ ವಿನಾಶಕಾರಿ ಅಣ್ವಸ್ತ್ರ ಕ್ಷಿಪಣಿಗಳನ್ನು ಭಾರತ ಈಗ ಅಭಿವೃದ್ದಿಪಡಿಸುತ್ತಿದೆ ಎಂದು ಅಮೆರಿಕದ ಇಬ್ಬರು ಉನ್ನತ ಅಣ್ವಸ್ಸ ತಜ್ಞರು ಹೇಳಿದ್ದಾರೆ. 

Advertisement

ಭಾರತ ಅತ್ಯಂತ ವಿನಾಶಕಾರಿಯಾಗಬಲ್ಲ 150ರಿಂದ 200 ಅಣು ಸಿಡಿತಲೆಗಳನ್ನು ತಯಾರಿಸುವಷ್ಟು ಪ್ಲುಟೋನಿಯಂ  ಅನ್ನು ತನ್ನ ಸಂಗ್ರಹದಲ್ಲಿ ಹೊಂದಿದೆ; ಈಗಾಗಲೇ ಬಹುತೇಕ ಅದು 120ರಿಂದ 130ರಷ್ಟು ಅಣುಸಿಡಿತಲೆಗಳನ್ನು ಉತ್ಪಾದಿಸಿರಬಹುದು ಎಂದು “ಆಫ್ಟರ್‌ ಮಿಡ್‌ನೈಟ್‌’ ಎಂಬ ಹೆಸರಿನ ವಿದ್ಯುನ್ಮಾನ ನಿಯತಕಾಲಿಕದ ಜುಲೈ-ಆಗಸ್ಟ್‌ ಸಂಚಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಈ ಅಮೆರಿಕನ್‌ ಪರಿಣತರು ಹೇಳಿದ್ದಾರೆ. 

ಭಾರತ ಈ ವರೆಗೂ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ಥಾನವನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ಅಣ್ವಸ್ತ್ರಗಳನ್ನು ಸಿದ್ಧಪಡಿಸುತ್ತಿತ್ತು. ಆದರೆ ಕಮ್ಯುನಿಸ್ಟ್‌ ದಿಗ್ಗಜ ದೇಶವಾಗಿರುವ ಚೀನದಿಂದ ತನಗೆ ಎದುರಾಗುವ ಸವಾಲುಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಭಾರತ ತನ್ನ ಅಣ್ವಸ್ತ್ರಗಳನ್ನು ಆಧುನೀಕರಿಸುತ್ತಿರುವಂತೆ ತೋರಿ ಬರುತ್ತಿದೆ ಎಂದು ಹ್ಯಾನ್ಸ್‌ ಎಂ ಕ್ರಿಸ್ಟನ್‌ಸನ್‌ ಮತ್ತು ರಾಬರ್ಟ್‌ ಎಸ್‌ ನೋರಿಸ್‌ ಅವರು “ದಿ ಇಂಡಿಯನ್‌ ನ್ಯೂಕ್ಲಿಯರ್‌ ಫೋರ್‌ಸಸ್‌ 2017′ ಎಂಬ ಶೀರ್ಷಿಕೆಯ ಲೇಖನದಲ್ಲಿ ಬರೆದಿದ್ದಾರೆ. 

ಚೀನದೊಂದಿಗಿನ ಭವಿಷ್ಯದ ತನ್ನ ವ್ಯೂಹಾತ್ಮಕ ಸಂಬಂಧಗಳಿಗೆ ಭಾರತ ಹೆಚ್ಚು ಒತ್ತು ನೀಡುತ್ತಿರುವುದರಿಂದ ತನ್ನ ಅಣ್ವಸ್ತ್ರಗಳ ಸಂಗ್ರಹವನ್ನು ಆಧುನೀಕರಿಸುವ ದಿಶೆಯಲ್ಲಿ ಅದು ಅತ್ಯಂತ ಕ್ರಿಯಾಶೀಲವಾಗಿದೆ ಎಂದು ಅವರು ಬರೆದಿದ್ದಾರೆ. 

ಭಾರತವು ಈಗಾಗಲೇ ಶಸ್ತ್ರಾಸ್ತ್ರ ದರ್ಜೆಯ 600 ಕಿಲೋಗ್ರಾಂ ಪ್ಲುಟೋನಿಯಂ  ಅನ್ನು ಬಹುತೇಕ ಉತ್ಪಾದಿಸಿದೆ. ಇದು 150 – 200 ಅಣ್ವಸ್ತ್ರ ಸಿಡಿ ತಲೆಗಳ ನಿರ್ಮಾಣಕ್ಕೆ ಸಾಕಾಗುತ್ತದೆ. ಹಾಗಿದ್ದರೂ ಭಾರತದ ತನ್ನ ಸಂಗ್ರಹದಲ್ಲಿರುವ ಪ್ಲುಟೋನಿಯಂ ನ ಪೂರ್ಣ ಪ್ರಮಾಣವನ್ನು ಶಸ್ತ್ರಾಸ್ತ್ರ  ದರ್ಜೆಗೆ ಪರಿವರ್ತಿಸಿಲ್ಲ ಎಂದು ಲೇಖನದಲ್ಲಿ ಹೇಳಲಾಗಿದೆ. 

Advertisement

ಕ್ರಿಸ್ಟನ್‌ಸನ್‌ ಮತ್ತು ನೋರಿಸ್‌ ಅವರ ಪ್ರಕಾರ ಅಗ್ನಿ 1 ಮತ್ತು ಸುಧಾರಿತ ಅಗ್ನಿ 2 ಎರಡು ಹಂತಗಳ ಅಣ್ವಸ್ತ್ರ ಕ್ಷಿಪಣಿಗಳು ಪಶ್ಚಿಮ, ಮಧ್ಯ ಹಾಗೂ ದಕ್ಷಿಣ ಚೀನದ ಎಲ್ಲ ಗುರಿಗಳನ್ನು ಭೆದಿಸಲು ಅಗತ್ಯವಿರುವ 2,000 ಕಿ.ಮೀ.ಗಳನ್ನು ಕ್ರಮಿಸಬಲ್ಲ ದೂರ ವ್ಯಾಪ್ತಿ ಸಾಮರ್ಥ್ಯವನ್ನು ಹೊಂದಿವೆ. ಇದನ್ನೂ ಮೀರಿಸುವ ಅಗ್ನಿ 4 ಅಣ್ವಸ್ತ್ರ ಕ್ಷಿಪಣಿಯನ್ನು ಈಶಾನ್ಯ ಭಾರತದಿಂದ ಉಡಾಯಿಸಿದ್ದೇ ಆದಲ್ಲಿ ಅದು ಬೀಜಿಂಗ್‌ ಮತ್ತು ಶಾಂಘೈ ಸಹಿತ ಇಡಿಯ ಚೀನದ ಎಲ್ಲ ಗುರಿಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next