Advertisement
ಸುಡಾನ್‌ನ ಅಬೈ ಪ್ರದೇಶದಲ್ಲಿ ವಿಶ್ವಸಂಸ್ಥೆ ಮಧ್ಯಂತರ ಭದ್ರತಾಪಡೆಯ (ಯುಎನ್‌ಐಎಸ್‌ಎಫ್ಎ) ಭಾರತೀಯ ಬೆಟಾಲಿಯನ್ ಭಾಗವಾಗಿ ಇಬ್ಬರು ಅಧಿಕಾರಿ ಗಳು ಮತ್ತು ಇತರೆ ರ್‍ಯಾಂಕ್‌ನ 25 ಮಹಿಳಾ ಶಾಂತಿಪಾಲಕರ ತುಕಡಿಯನ್ನು ನಿಯೋಜಿಸಲು ಭಾರತ ಸಿದ್ಧತೆ ನಡೆಸಿದೆ. ಇದು ವಿಶ್ವಸಂಸ್ಥೆ ಮಿಷನ್‌ನಲ್ಲಿ ಈ ವರೆಗೆ ನೇಮಕಗೊಂಡಿರುವ ಭಾರತೀಯ ಮಹಿಳಾ ಶಾಂತಿಪಾಲಕರ ಪೈಕಿ ಅತಿದೊಡ್ಡ ಘಟಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಡಾನ್ ನಲ್ಲಿ ಭಾರತದ ಮಹಿಳಾ ಶಾಂತಿಪಾ ಲಕರ ಪಡೆ ನೇಮಕವಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಸೇನೆಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತದ ನಾರಿ ಶಕ್ತಿ ಭಾಗವಹಿಸುವಿಕೆಯಿಂದಾಗಿ ಹೆಚ್ಚು ಸಂತೋಷವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.