Advertisement

ವಿಶ್ವಸಂಸ್ಥೆಯಿಂದ ಮಹಾತ್ಮನಿಗೆ ಅವಮಾನ

06:35 AM Nov 11, 2017 | |

ನವದೆಹಲಿ: ಮಾನವ ಹಕ್ಕುಗಳು, ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ವಿಶ್ವಸಂಸ್ಥೆಯ ವಿಶೇಷ ಕಾರ್ಯ ಕಲಾಪ ವರದಿಗಾರ ಲಿಯೋ ಹೆಲ್ಲರ್‌ ವರದಿಯಲ್ಲಿ ಮಹಾತ್ಮ ಗಾಂಧಿಗೆ ಅವಮಾನ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಟೀಕಿಸಿದೆ.

Advertisement

ಸ್ವತ್ಛ ಭಾರತ ಯೋಜನೆಯ ಲೋಗೋವನ್ನಾಗಿ ಗಾಂಧಿಯ ಕನ್ನಡಕದ ಚಿತ್ರ ಬಳಸಲಾ ಗಿದ್ದು, ಇದರ ಬದಲಿಗೆ ಮಾನವ ಹಕ್ಕುಗಳ ಮಸೂರವನ್ನು ಬಳಸಬೇಕಿದೆ ಎಂದು ಲಿಯೋ ವರದಿ ಮಾಡಿದ್ದರು. ಮಾನವ ಹಕ್ಕುಗಳು ಹಾಗೂ ನೈರ್ಮಲ್ಯದ ಬಗ್ಗೆ ಮಹಾತ್ಮ ಹಿಂದಿನಿಂದಲೂ ಶ್ರಮಿಸಿದ್ದರು ಎಂಬುದು ವಿಶ್ವಕ್ಕೇ ತಿಳಿದಿದೆ. ಸ್ವತ್ಛ ಭಾರತ ಲೋಗೋದಲ್ಲಿ ಅವರ ಕನ್ನಡಕದ ಚಿತ್ರವು ಇದನ್ನೇ ಪ್ರತಿಫ‌ಲಿಸುತ್ತದೆ. ಭಾರತದ ನೀರು ಮತ್ತು ನೈರ್ಮಲ್ಯದ ಬಗ್ಗೆ ಲಿಯೋ ಸಮರ್ಪಕವಾಗಿ ತಿಳಿವಳಿಕೆ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next