Advertisement

Pollution ದಿಲ್ಲಿಯಲ್ಲಿ ಪಟಾಕಿಗಳಿಗೆ ನಿಷೇಧ: ದೆಹಲಿ ಸರ್ಕಾರ ಆದೇಶ

09:31 PM Sep 11, 2023 | Team Udayavani |

ನವದೆಹಲಿ: ಎಲ್ಲಾ ರೀತಿಯ ಪಟಾಕಿಗಳ ತಯಾರಿ, ಸಂಗ್ರಹ, ಮಾರಾಟದ ಮೇಲೆ ದೆಹಲಿ ಸರ್ಕಾರ ನಿಷೇಧ ಹೇರಿ ಸೋಮವಾರ ಆದೇಶ ಹೊರಡಿಸಿದೆ.

Advertisement

ದೆಹಲಿ ವ್ಯಾಪ್ತಿಯಲ್ಲಿ ಚಳಿಗಾಲದ ಅವಧಿಯಲ್ಲಿ ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪರಿಸರ ಸಚಿವ ಗೋಪಾಲ ರಾಯ್‌ ಹೇಳಿದ್ದಾರೆ.

ಪಟಾಕಿಗಳ ಮೇಲೆ ನಿಯಂತ್ರಣ ಹೇರಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ಇಂಥ ಕ್ರಮ ಕೈಗೊಂಡ ಬಳಿಕ ದೆಹಲಿ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ತಗ್ಗಿದೆ. ಆ ಸ್ಥಿತಿ ಇನ್ನೂ ಸುಧಾರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next