Advertisement

ಭಾರತಕ್ಕೆ ಸುಲ್ತಾನ್‌ ಆಫ್ ಜೋಹರ್‌ ಕಪ್‌

11:06 PM Oct 29, 2022 | Team Udayavani |

ಜೋಹರ್‌ ಬಹ್ರು (ಮಲೇಷ್ಯಾ): ಎರಡು ಬಾರಿಯ ಚಾಂಪಿಯನ್ಸ್‌ ಭಾರತವು ತೀವ್ರ ಪೈಪೋಟಿಯಿಂದ ಸಾಗಿದ ಫೈನಲ್‌ ಹೋರಾಟದಲ್ಲಿ ಬಲಿಷ್ಠ ಆಸ್ಟ್ರೇಲಿಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಿಂದ ಸೋಲಿಸಿ ಸುಲ್ತಾನ್‌ ಆಫ್ ಜೋಹರ್‌ ಕಪ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಭಾರತವು ಐದು ವರ್ಷಗಳ ಬಳಿಕ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

Advertisement

ನಿಗದಿತ ಅವಧಿಯ ಆಟದ ವೇಳೆ ಭಾರತ ಮತ್ತು ಆಸ್ಟ್ರೇಲಿಯ 1-1 ಗೋಲಿನಿಂದ ಸಮಬಲ ಸ್ಥಾಪಿಸಿತ್ತು. ಪ್ರಶಸ್ತಿ ನಿರ್ಣಯಿಸಲು ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿಯೂ ಉಭಯ ತಂಡಗಳು 3-3 ಸಮಬಲ ಸಾಧಿಸಿದ್ದವು. ಇದರಿಂದ ಪ್ರಶಸ್ತಿ ನಿರ್ಣಯಿಸಲು ಸಡನ್‌ ಡೆತ್‌ ಅಳವಡಿಸಲಾಯಿತು. ಇದರಲ್ಲಿ ಭಾರತ ಜಯಭೇರಿ ಬಾರಿಸಿತು.

ಭಾರತದ ಉತ್ತಮ್‌ ಸಿಂಗ್‌ ಶೂಟೌ ಟ್‌ನಲ್ಲಿ ಎರಡು ಗೋಲು ಹೊಡೆದರು. ಇದರಲ್ಲಿ ಸಡನ್‌ ಡೆತ್‌ನಲ್ಲಿ ಹೊಡೆದ ಗೋಲು ಸೇರಿದೆ. ಅವರಲ್ಲದೇ ವಿಷ್ಣುಕಾಂತ್‌ ಸಿಂಗ್‌, ಅಂಕಿತ್‌ ಪಾಲ್‌, ಸುದೀಪ್‌ ಚಿರ್ಮಾಕೊ ಭಾರತ ಪರ ಗೋಲು ಹೊಡೆದ ಆಟಗಾರರಾಗಿದ್ದಾರೆ.

ಶೂಟೌಟ್‌ ಬಳಿಕ ಸಡನ್‌ ಡೆತ್‌ನಲ್ಲಿ ವಿಷ್ಣುಕಾಂತ್‌ ಗೋಲು ಹೊಡೆಯಲು ವಿಫ‌ಲರಾಗಿದ್ದರು. ಹರ್ಟ್‌ ಲಿಯಮ್‌ ಕೂಡ ಗೋಲು ಹೊಡೆಯಲಿಲ್ಲ. ಉತ್ತಮ್‌ ಗೋಲು ಹೊಡೆದ ಕಾರಣ 4-3 ಮುನ್ನಡೆ ಪಡೆಯಿತು. ಇದನ್ನು ಬರ್ನ್ಸ್ 4-4 ಸಮಬಲ ಮಾಡಿದರು. ಆಬಳಿಕ ಸುದೀಪ್‌ ಗೋಲು ಹೊಡೆದು 5-4 ಮುನ್ನಡೆ ಸಾಧಿಸಿದರು. ನಿರ್ಣಾಯಕ ಪ್ರಯತ್ನದಲ್ಲಿ ಬ್ರೂಕ್ಸ್‌ ಜೋಶುವ ಗೋಲು ಹೊಡೆಯಲು ವಿಫ‌ಲರಾದ ಕಾರಣ ಭಾರತ ಜಯಭೇರಿ ಬಾರಿಸಿ ಸಂಭ್ರಮಿಸಿತು.

ಭಾರತ ಪರ ಸಂದೀಪ್‌ 13ನೇ ನಿಮಿಷದಲ್ಲಿ ಫೀಲ್ಡ್‌ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿದ್ದರು. 28ನೇ ನಿಮಿಷದಲ್ಲಿ ಜಾಕ್‌ ಹೊಲ್ಲಾಡ್‌ ಗೋಲು ಹೊಡೆದು ಸಮಬಲ ಸ್ಥಾಪಿಸಿದ್ದರು.

Advertisement

ಭಾರತ ಈ ಪ್ರಶಸ್ತಿಯನ್ನು 2013 ಮತ್ತು 2014ರಲ್ಲಿ ಜಯಿಸಿದ್ದರೆ 4 ಬಾರಿ ಫೈನಲಿಗೇರಿದ ಸಾಧನೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next