ಮೊಹಾಲಿ: ಪ್ರವಾಸಿ ಶ್ರೀಲಂಕಾ ಬೌಲರ್ ಗಳ ದಾಳಿಯನ್ನು ಲೀಲಾಜಾಲವಾಗಿ ದಂಡಿಸಿದ ರವೀಂದ್ರ ಜಡೇಜಾ ಇನ್ನೇನು ತನ್ನ ಮೊದಲ ದ್ವಿಶತಕ ಬಾರಿಸುತ್ತಾರೆ ಎನ್ನುವಾಗಲೇ ನಾಯಕ ರೋಹಿತ್ ಶರ್ಮಾ ಇನ್ನಿಂಗ್ ಡಿಕ್ಲೇರ್ ಘೋಷಣೆ ಮಾಡಿದರು. ಇದರಿಂದಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಶತಕ ಬಾರಿಸಿದ ರವೀಂದ್ರ ಜಡೇಜಾ 175 ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಬೇಕಾಯಿತು.
ಮೊದಲ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ್ದ ಟೀಂ ಇಂಡಿಯಾ ಇಂದು ಇನ್ನೆರಡು ವಿಕೆಟ್ ಕಳೆದುಕೊಂಡು 574 ರನ್ ಗಳಿಸಿದೆ. ಈ ವೇಳೆ ನಾಯಕ ರೋಹಿತ್ ಇನ್ನಿಂಗ್ ಡಿಕ್ಲೇರ್ ಮಾಡಿದರು.
ಇದನ್ನೂ ಓದಿ:ಶೇನ್ ವಾರ್ನ್ ನಿಧನದ ವಿಚಾರ ಗೊತ್ತಾಗಿದ್ದು ವೀರೇಂದ್ರ ಸೆಹ್ವಾಗ್ ರಿಂದ!
ಶುಕ್ರವಾರದ ಆಟದ ಅಂತ್ಯಕ್ಕೆ 45 ರನ್ ಗಳಿಸಿ ಅಜೇಯರಾಗುಳಿದಿದ್ದ ರವೀಂದ್ರ ಜಡೇಜಾ ಇಂದು ವೇಗವಾಗಿಯೇ ಬ್ಯಾಟ್ ಬೀಸಿದರು. 160 ಎಸೆತಗಳಲ್ಲಿ ಶತಕ ಪೂರೈಸಿದ ಜಡೇಜಾ, ಅಂತಿಮವಾಗಿ 228 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದರು. ಈ ಇನ್ನಿಂಗ್ಸ್ ನಲ್ಲಿ ಜಡೇಜಾ 17 ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದರು.
Related Articles
ಜಡೇಜಾಗೆ ಉತ್ತಮ ಸಾಥ್ ನೀಡಿದ ರವಿ ಅಶ್ವಿನ್ 63 ರನ್ ಗಳಿಸಿದರು. ಕೊನೆಯಲ್ಲಿ ಶಮಿ 20 ರನ್ ಗಳ ಬಹುಮೂಲ್ಯ ಕೊಡುಗೆ ನೀಡಿದರು.
ಹಲವು ದಾಖಲೆ: ರವೀಂದ್ರ ಜಡೇಜಾ ಈ ಇನ್ನಿಂಗ್ಸ್ ನಲ್ಲಿ ಹಲವು ದಾಖಲೆಗನ್ನು ಬರೆದರು. ಏಳನೇ ಕ್ರಮಾಂಕದಲ್ಲಿ ಆಡಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ದಾಖಲೆಯನ್ನು ಜಡೇಜಾ ಬರೆದರು. ಈ ಮೊದಲು ಈ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿತ್ತು (170 ರನ್)
ರವೀಂದ್ರ ಜಡೇಜಾ ಒಂದೇ ಇನ್ನಿಂಗ್ಸ್ ನಲ್ಲಿ ಮೂರು ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಈ ಸಾಧನೆ ಮಾಡಿದ ಐದನೇ ಭಾರತೀಯ ಎನಿಸಿದರು.
175* ಇದು ರವೀಂದ್ರ ಜಡೇಜಾದ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಮೊತ್ತ. 2018ರಲ್ಲಿ ರಾಜ್ ಕೋಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಶತಕ ಬಾರಿಸಿದ್ದರು. (100)