ನವದೆಹಲಿ: ಕಳೆದ 5 ತಿಂಗಳಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿರುವ ಕುರಿತು ವರದಿಯಾಗಿದೆ. 24 ಗಂಟೆಯಲ್ಲಿ 2,151 ಕೋವಿಡ್ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶದಲ್ಲಿ ದಾಖಲಾಗಿದೆ.
2022 ರ ಅಕ್ಟೋಬರ್ 28 ರಂದು 2,208 ಕೋವಿಡ್ ಪ್ರಕರಣಗಳು ಪತ್ತೆಯಾಗಿತ್ತು. ಇದೀಗ 152 ದಿನಗಳ ಬಳಿಕ ಅಂದರೆ 5 ತಿಂಗಳ ಬಳಿಕ ಒಂದೇ ದಿನದಲ್ಲಿ 2,151 ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದು ಭೀತಿಗೆ ಕಾರಣವಾಗಿದೆ.
ದೈನಂದಿನ ಪಾಸಿಟಿವ್ ಪ್ರಕರಣ ದರವು 1.51 ಪ್ರತಿಶತದಷ್ಟಿದೆ. ವಾರದ ಪಾಸಿಟಿವ್ ಪ್ರಕರಣ ದರವು 1.53 ರಷ್ಟು ದಾಖಲಾಗಿದೆ.
ಇದನ್ನೂ ಓದಿ: ಮಂಗಳೂರು: ಇಬ್ಬರು ಬೈಕ್ ಕಳ್ಳರ ಬಂಧನ; ಕಳವುಗೈದ ಬೈಕ್ ನಲ್ಲಿ ತಿರುಗಾಡಿ ಸಿಕ್ಕಿಬಿದ್ದರು
Related Articles
ಇತ್ತೀಚೆಗಿನ 7 ಸಾವಿನೊಂದಿಗೆ ಮೃತರ ಸಂಖ್ಯೆ 5,30,848 ಕ್ಕೇರಿದೆ. ಇದರಲ್ಲಿ ಮಹಾರಾಷ್ಟ್ರ, ಕರ್ನಾಟಕದ ಒಂದು, ಕೇರಳದ ಮೂವರು ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.47 ಕೋಟಿ ದಾಖಲಾಗಿದೆ. ಕೋವಿಡ್ ಸಾವಿನ ಪ್ರಕರಣ ಪ್ರಮಾಣವು ಶೇ.1.19 ರಷ್ಟ್ಟಿದೆ. 1,200 ಕ್ಕೂ ಅಧಿಕ ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದು, ಚೇತರಿಸಿಕೊಂಡವರ ಸಂಖ್ಯೆ 4,41,66,925 ಕ್ಕೇರಿದೆ.
ಕೋವಿಡ್ 19 ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.65 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯದ ವೆಬ್‌ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳು 11,903 ಕ್ಕೇರಿದೆ.