ಹೊಸದಿಲ್ಲಿ: ಎರಡು ಬಾರಿಯ ಫೈನಲಿಸ್ಟ್ ಭಾರತ ಭಾನುವಾರ ಬಿಡುಗಡೆಯಾದ ಇತ್ತೀಚಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಜಿಗಿದಿದೆ.
ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಅನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದ ಭಾರತ, ಕಿವೀಸ್ ತಂಡವನ್ನು ಮೀರಿ 64.58 ರಷ್ಟು ಪ್ರಬಲ ಅಂಕಗಳನ್ನು ತನ್ನದಾಗಿಸಿಕೊಂಡಿದೆ.
ವೆಲ್ಲಿಂಗ್ಟನ್ ಟೆಸ್ಟ್ ಆರಂಭಕ್ಕೂ ಮುನ್ನ ನ್ಯೂಜಿ ಲ್ಯಾಂಡ್ ನಾಲ್ಕು ಪಂದ್ಯಗಳಲ್ಲಿ 36 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು ಮತ್ತು ಶೇಕಡಾ 75 ಅಂಕಗಳನ್ನು ಗಳಿಸಿತ್ತು. ಆದರೆ 172 ರನ್‌ಗಳ ಬೃಹತ್ ಸೋಲಿನ ನಂತರ, 2021 ರ WTC ಚಾಂಪಿಯನ್ ಅಗ್ರ ಸ್ಥಾನವನ್ನು ಕಳೆದುಕೊಂಡಿದೆ. ಶೇಕಡಾ 60 ರ ಅಂಕಗಳೊಂದಿಗೆ ನಂ 2 ಸ್ಥಾನಕ್ಕೆ ಜಾರಿದೆ.
ಇದನ್ನೂ ಓದಿ : 1st Test; ನ್ಯೂಜಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ಅಮೋಘ ಜಯ
ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯ ವೆಲ್ಲಿಂಗ್ಟನ್ ಟೆಸ್ಟ್ ಗೆಲುವಿನ ನಂತರ 12 ನಿರ್ಣಾಯಕ ಅಂಕಗಳನ್ನು ಗಳಿಸಿದೆ, 11 ಪಂದ್ಯಗಳಿಂದ 78 ಅಂಕಗಳನ್ನು ಹೊಂದಿದೆ (ಏಳು ಗೆಲುವು, ಮೂರು ಸೋಲು ಮತ್ತು ಒಂದು ಡ್ರಾ). ಅಂಕಗಳ ಶೇಕಡಾವಾರು ಸಹ 55 ರಿಂದ 59.09 ಕ್ಕೆ ಏರಿದೆ.