Advertisement
ಸಣ್ಣ ಮೊತ್ತದ ಈ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 45.5 ಓವರ್‌ಗಳಲ್ಲಿ 146ಕ್ಕೆ ಆಲೌಟಾದರೆ, ದಕ್ಷಿಣ ಆಫ್ರಿಕಾ 48 ಓವರ್‌ಗಳಲ್ಲಿ 140ಕ್ಕೆ ಕುಸಿಯಿತು. ಇಲ್ಲೇ ನಡೆದ ಮೊದಲೆರಡು ಪಂದ್ಯಗಳಲ್ಲಿ ಭಾರತ 8 ವಿಕೆಟ್ ಹಾಗೂ 5 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಇದಕ್ಕೂ ಹಿಂದಿನ 6 ಪಂದ್ಯಗಳ ಟಿ20 ಸರಣಿಯನ್ನು ಭಾರತ 3-1ರಿಂದ ಜಯಿಸಿತ್ತು.
ಪಂದ್ಯದುದ್ದಕ್ಕೂ ಬೌಲರ್‌ಗಳೇ ಮೇಲುಗೈ ಸಾಧಿಸಿದರು. ಚೇಸಿಂಗ್ ವೇಳೆ ದಕ್ಷಿಣ ಆಫ್ರಿಕಾ 63ಕ್ಕೆ 5 ವಿಕೆಟ್ ಕಳೆದುಕೊಂಡಾಗಲೇ ಭಾರತದ ಗೆಲುವು ಖಾತ್ರಿಯಾಗಿತ್ತು. ಆದರೆ 6ನೇ ವಿಕೆಟಿಗೆ ಜತೆಗೂಡಿದ ನಾಯಕಿ ಸುನ್ ಲುಸ್ (24) ಮತ್ತು ಮರಿಜಾನ್ ಕಾಪ್ (29) 40 ರನ್ ಒಟ್ಟುಗೂಡಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ಮತ್ತೆ ಮೇಲುಗೈ ಸಾಧಿಸಿತು. ಏಕ್ತಾ ಬಿಷ್ಟ್ 3, ದೀಪ್ತಿ ಶರ್ಮ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಉರುಳಿಸಿ ಭಾರತದ ಗೆಲುವು ಸಾರಿದರು. ಆರಂಭಿಕರಾದ ಪ್ರಿಯಾ ಪೂನಿಯ (0) ಮತ್ತು ಜೆಮಿಮಾ ರೋಡ್ರಿಗಸ್ (3) ಅವರನ್ನು ಬೇಗನೇ ಕಳೆದುಕೊಂಡ ಭಾರತ ಭಾರೀ ಆಘಾತಕ್ಕೆ ಸಿಲುಕಿತು. ಮಿಥಾಲಿ (11) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದಲ್ಲೂ ಭಾರತ ಚಡಪಡಿಸಿತು. 30ನೇ ಓವರ್ ವೇಳೆ ಭಾರತ 71 ರನ್ನಿಗೆ 6 ವಿಕೆಟ್ ಉದುರಿಸಿಕೊಂಡಿತ್ತು. ಹರ್ಮನ್‌ಪ್ರೀತ್ ಕೌರ್ (38) ಮತ್ತು ಶಿಖಾ ಪಾಂಡೆ (35) 49 ರನ್ ಜತೆಯಾಟ ನಡೆಸಿ ತಂಡವನ್ನು ಮೇಲೆತ್ತಿದರು.
Related Articles
ಭಾರತ-45.5 ಓವರ್‌ಗಳಲ್ಲಿ 146 (ಕೌರ್ 38, ಪಾಂಡೆ 35, ರಾವತ್ 15, ಕಾಪ್ 20ಕ್ಕೆ 3, ಶಬ್ನಮ್ 18ಕ್ಕೆ 2, ಖಾಕಾ 33ಕ್ಕೆ 2). ದಕ್ಷಿಣ ಆಫ್ರಿಕಾ-48 ಓವರ್‌ಗಳಲ್ಲಿ 140 (ಕಾಪ್ 29, ಲುಸ್ 24, ವೋಲ್ವಾರ್ಟ್ 23, ಏಕ್ತಾ 32ಕ್ಕೆ 3, ರಾಜೇಶ್ವರಿ 22ಕ್ಕೆ 2, ದೀಪ್ತಿ 24ಕ್ಕೆ 2). ಪಂದ್ಯಶ್ರೇಷ್ಠ: ಏಕ್ತಾ ಬಿಷ್ಟ್. ಸರಣಿಶ್ರೇಷ್ಠ: ಮರಿಜಾನ್ ಕಾಪ್.
Advertisement