Advertisement

ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು

11:48 PM Aug 12, 2019 | Team Udayavani |

ಬೀಜಿಂಗ್‌: ಭಾರತ ಮತ್ತು ಚೀನ ಮಧ್ಯದ ರಾಜ ತಾಂತ್ರಿಕ ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು ಎಂದು ಚೀನ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ. ಇನ್ನೊಂದೆಡೆ ಜಮ್ಮು ಕಾಶ್ಮೀರದ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಚೀನ ಹೇಳಿದ್ದು, ಈ ವಲಯದ ಶಾಂತಿ ಮತ್ತು ಸ್ಥಿರತೆಗೆ ಭಾರತ ರಚನಾತ್ಮಕ ಪಾತ್ರ ವಹಿಸಬೇಕು ಎಂದಿದೆ.

Advertisement

3 ದಿನಗಳ ಭೇಟಿಯಲ್ಲಿ ಚೀನ ಉಪಾಧ್ಯಕ್ಷ ವಾಂಗ್‌ ಖೀಶಾನ್‌ ಮತ್ತು ವಿದೇಶಾಂಗ ಸಚಿವ ವಾಂಗ್‌ ಯಿ ಜೊತೆಗೆ ಸೋಮವಾರ ಜೈಶಂಕರ್‌ ಮಾತುಕತೆ ನಡೆಸಿದರು. ಅನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಜಮ್ಮು ಕಾಶ್ಮೀರದ ವಿಚಾರವನ್ನು ನೇರವಾಗಿ ಪ್ರಸ್ತಾವಿಸಲಿಲ್ಲ. ಬದಲಿಗೆ ಭಾರತ- ಪಾಕ್‌ ನಡುವಿನ ಸಂಘರ್ಷವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ವಾಂಗ್‌ ಯಿ ಹೇಳಿದ್ದಾರೆ.

ಬಳಿಕ ಮಾತನಾಡಿದ ಜೈಶಂಕರ್‌, ಭಾರತ- ಚೀನದ ಸಂಬಂಧವು ಜಾಗತಿಕ ರಾಜಕಾರಣದಲ್ಲಿ ಅತ್ಯಂತ ಮಹತ್ವ ಪಡೆದಿದೆ. ಎರಡು ವರ್ಷಗಳ ಹಿಂದೆ ಈ ಅಂಶವನ್ನು ಮನಗಂಡು ಉಭಯ ದೇಶಗಳೂ ಒಮ್ಮತಕ್ಕೆ ಬಂದಿವೆ. ನಮ್ಮ ಮಧ್ಯೆ ಇರಬಹುದಾದ ಯಾವುದೇ ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು. ಕಳೆದ ವುಹಾನ್‌ ಶೃಂಗದಲ್ಲಿ ಎರಡೂ ದೇಶಗಳು ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿವೆ. ಅಂದಿನಿಂದಲೂ ನಮ್ಮ ಸಂಬಂಧದಲ್ಲಿ ಸುಧಾರಣೆಯಾಗಿರು ವುದನ್ನು ನಾವು ಕಂಡಿದ್ದೇವೆ ಎಂದಿದ್ದಾರೆ. ಇದೇ ವೇಳೆ, ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಸಂಬಂಧಿಸಿ ನಾಲ್ಕು ಒಪ್ಪಂದಗಳಿಗೆ ಭಾರತ-ಚೀನ ಸಹಿ ಹಾಕಿದವು.

Advertisement

Udayavani is now on Telegram. Click here to join our channel and stay updated with the latest news.

Next