Advertisement

ಇನ್ನೊಂದು ಡೋಕ್ಲಾಂ ಸಂಘರ್ಷ ಉಂಟಾಗದು: ಚೀನ ರಾಯಭಾರಿ

10:52 AM Jun 19, 2018 | Harsha Rao |

ಹೊಸದಿಲ್ಲಿ: ಭಾರತ ಮತ್ತು ಚೀನದ ಸಂಬಂಧವು ಇನ್ನೊಂದು ಡೋಕ್ಲಾಂ ಸಂಘರ್ಷದ ಹೊರೆ ಹೊರುವುದು ಅಸಾಧ್ಯ ಎಂದು ಎಂದು ಭಾರತದಲ್ಲಿನ ಚೀನ ರಾಯಭಾರಿ ಲುವೊ ಝಾವೋಯಿ ಹೇಳಿದ್ದಾರೆ.

Advertisement

ವಿಶೇಷ ಪ್ರತಿನಿಧಿಗಳ ಸಭೆಯ ಮೂಲಕ ಗಡಿ ಸಮಸ್ಯೆಗೆ ಪರಸ್ಪರ ಸಮ್ಮತಿಯ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕೆಲವು ಭಾರತೀಯ ಸ್ನೇಹಿತರು ಭಾರತ, ಚೀನ ಮತ್ತು ಪಾಕಿಸ್ಥಾನ‌ದ ತ್ರಿಪಕ್ಷೀಯ ಮಾತುಕತೆಗೆ ಸಲಹೆ ನೀಡಿದ್ದಾರೆ. ಇದು ಉತ್ತಮ ಕಲ್ಪನೆ ಎಂದೂ ಅವರು ಹೇಳಿದ್ದಾರೆ. ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವುಗಳನ್ನು ಸಹಕಾರದಿಂದ ನಿಯಂತ್ರಣ ಮತ್ತು ನಿರ್ವಹಣೆ ಮಾಡಬೇಕು ಎಂದಿದ್ದಾರೆ.

ಕಳೆದ ವರ್ಷ ಚೀನ ಸೇನೆ ಡೋಕ್ಲಾಂ ಗಡಿ ನುಸುಳಿ ಒಳಬಂದಿದ್ದರಿಂದ 73 ದಿನಗಳವರೆಗೆ ಬಿಕ್ಕಟ್ಟು ಉಂಟಾಗಿತ್ತು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗಿದ್ದು, ಆ ನಂತರದಲ್ಲಿ ಹಲವು ಸುತ್ತು ಉಭಯ ದೇಶಗಳ ಮಧ್ಯೆ ಮಾತುಕತೆ ನಡೆದಿದೆ. ಈ ವೇಳೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಚೀನ ರದ್ದುಗೊಳಿಸಿದ್ದಲ್ಲದೆ, ಉಭಯ ದೇಶಗಳ ಸೇನಾ ಕವಾಯತು ಕೂಡ ರದ್ದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next