Advertisement

15 ತಿಂಗಳ ಬಳಿಕ ಲಡಾಖ್ ನ ‘ಗೋಗ್ರಾ’ ಪ್ರದೇಶದಿಂದ ಚೀನಾ ಸೇನೆ ಹಿಂದಕ್ಕೆ

07:17 PM Aug 06, 2021 | Team Udayavani |

ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶದ ವಾಸ್ತವ ನಿಯಂತ್ರಣ ರೇಖೆಯಲ್ಲಿರುವ ಲಡಾಖ್ ನ   ಗೋಗ್ರಾ ಪ್ರದೇಶದಲ್ಲಿ ನಿಯೋಜಿಸಲಾದ ಸೇನೆಯನ್ನು ಹಿಂತೆಗೆದುಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ.

Advertisement

ಈ ಪ್ರದೇಶದಲ್ಲಿ ಕಳೆದ ವರ್ಷದ ಮೇ ತಿಂಗಳಿನಿಂದ ಭಾರತ ಹಾಗೂ ಚೀನಾ ದೇಶಗಳ ಸೇನೆ ಮುಖಾಮುಖಿ ಸ್ಥಿತಿಯಲ್ಲಿದ್ದವು. ಜುಲೈ 31 ರಂದು ಚುಶುಲ್ ಮೊಲ್ಡೋದಲ್ಲಿ ನಡೆದ ಕಾರ್ಪ್ಸ್ ಕಮಾಂಡರ್ ಗಳ ನಡುವಿನ 12 ನೇ ಸುತ್ತಿನ ಮಾತುಕತೆಯ ನಂತರ, ಭಾರತೀಯ ಮತ್ತು ಚೀನಾದ ಸೈನ್ಯವನ್ನು ಹಿಂದೆ ಕರೆಯಿಸಿಕೊಳ್ಳಲು ಉಭಯ ರಾಷ್ಟ್ರಗಳು ಸಮ್ಮತಿಸಿವೆ. ಎರಡೂ ದೇಶಗಳ ಶಾಶ್ವತ ನೆಲೆಯಲ್ಲಿ ಮಾತ್ರ ಸೇನಾ ಕಾವಲು ಇರಲಿದೆ.

ಒಪ್ಪಂದದ ಪ್ರಕಾರ, ಎರಡೂ ಕಡೆಯವರು ಈ ಪ್ರದೇಶದಲ್ಲಿ ಹಂತ ಹಂತವಾಗಿ, ಸಮನ್ವಯದಿಂದ ಸೇನೆ ಹಿಂತೆಗಯಲಾಗ್ತಿದೆ. ಈ ಪ್ರದೇಶದಲ್ಲಿ ರಚಿಸಲಾದ ಎಲ್ಲಾ ತಾತ್ಕಾಲಿಕ ನಿರ್ಮಾಣ, ಇತರ ಮೂಲಸೌಕರ್ಯಗಳನ್ನು ಕಿತ್ತುಹಾಕಲಾಗಿದೆ ಮತ್ತು ಪರಸ್ಪರ ಪರಿಶೀಲಿಸಲಾಗಿದೆ. ಈ ಪ್ರದೇಶದಲ್ಲಿನ ಭೂಸ್ವರೂಪವನ್ನು ಎರಡೂ ಕಡೆಯಿಂದ ಪುನಃ ಸ್ಥಾಪಿಸಲಾಗಿದೆ ಎಂದು ಹೇಳಲಾಗಿದೆ.

ಕಳೆದ ವರ್ಷ ಮೇ ನಲ್ಲಿ ಪಾಂಗಾಂಗ್ ಸರೋವರದ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಸೇನಾಪಡೆಗಳ ನಡುವಿನ ಗಡಿ ಬಿಕ್ಕಟ್ಟು ಭುಗಿಲೆದ್ದಿತ್ತು. ಎರಡೂ ಕಡೆಯವರು ಕ್ರಮೇಣವಾಗಿ ತಮ್ಮ ನಿಯೋಜನೆಯನ್ನು ಹೆಚ್ಚಿಸಿ ಭಾರೀ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಸನ್ನದ್ಧವಾಗಿಟ್ಟಿದ್ದರು, ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಸರಣಿಯ ಪರಿಣಾಮವಾಗಿ, ಉಭಯ ಪಕ್ಷಗಳು ಫೆಬ್ರವರಿಯಲ್ಲಿ ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವಿಕೆಯನ್ನು ಪೂರ್ಣಗೊಳಿಸಿದ ಒಪ್ಪಂದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next