Advertisement

ಭಾರತ, ಚೀನಾ ಸೇನಾ ಹಿಂಪಡೆತ ಪೂರ್ಣ: ದೀಪಾವಳಿ ದಿನ ಸಿಹಿ ಹಂಚಿಕೊಳ್ಳಲಿರುವ ಸೈನಿಕರು

10:48 PM Oct 30, 2024 | Team Udayavani |

ನವದೆಹಲಿ: ಪೂರ್ವ ಲಡಾಖ್‌ನ ಬಿಕ್ಕಟ್ಟಿನ ಪ್ರದೇಶಗಳಾದ ದೆಮಾcಕ್‌ ಮತ್ತು ಡೆಪ್ಸಾಂಗ್‌ಗಳಲ್ಲಿ ಭಾರತ ಹಾಗೂ ಚೀನಾ ಸೇನೆಗಳು ನಿಯೋಜನೆ ಮಾಡಿದ್ದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣವಾಗಿದೆ. ದೀಪಾವಳಿಯ ದಿನ ಉಭಯ ದೇಶದ ಸೈನಿಕರು ಸಿಹಿ ಹಂಚಿ ಶುಭ ಹಾರೈಸಲಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.

Advertisement

ಗಡಿಯಲ್ಲಿ ಬಿಕ್ಕಟ್ಟು ಶಮನಗೊಳಿಸುವುದು ಹಾಗೂ 2020ರ ಏಪ್ರಿಲ್‌ಗ‌ೂ ಹಿಂದೆ ಇದ್ದಂತೆ ಸೇನಾ ಗಸ್ತು ಮುಂದುವರಿಸುವ ವ್ಯವಸ್ಥೆಯನ್ನು ಮರುಸ್ಥಾಪಿಸಲು ಉಭಯ ದೇಶಗಳು ಕೆಲ ದಿನಗಳ ಹಿಂದೆ ಒಪ್ಪಂದ ಮಾಡಿಕೊಂಡಿದ್ದವು. ಕೋಲ್ಕತಾದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಚೀನಾದ ರಾಯಭಾರಿ, “ಈಗಾಗಲೇ ನಡೆದಿರುವ ಒಪ್ಪಂದದ ಪ್ರಕಾರ ಎಲ್ಲವೂ ಸುಲಲಿತವಾಗಿ ನಡೆಯು ತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಭಿನ್ನಾಭಿ ಪ್ರಾಯಗಳಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಹೇಳಿದ್ದಾರೆ. ಅ.29ರ ವೇಳೆಗೆ ಸೇನಾ ಹಿಂತೆಗೆತ ಪೂರ್ಣಗೊಳ್ಳ ಬಹುದು ಎಂದು ಮೂಲಗಳು ಈ ಹಿಂದೆ ತಿಳಿಸಿದ್ದವು.

ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ಸೇನಾ ಹಿಂತೆಗೆತದ ಬಗ್ಗೆಯೂ ಉಭಯ ನಾಯಕರು ಮಾತನಾಡಿದ್ದರು.

ಬಿಕ್ಕಟ್ಟು ಪರಿಹಾರಕ್ಕೆ ಹೆಚ್ಚಿನ ಮಾತುಕತೆ?
ಡೆಮಾcಕ್‌ ಮತ್ತು ಡೆಪ್ಸಾಂಗ್‌ಗಳಲ್ಲಿ ಸೇನಾ ಹಿಂಪಡೆತದ ಬಳಿಕ ಉಭಯ ದೇಶಗಳ ನಡುವಿನ ಬಿಕ್ಕಟ್ಟುಗಳ ಪರಿಹಾರಕ್ಕಾಗಿಯೂ ಮಾತುಕತೆ ನಡೆಯುವ ಸಾಧ್ಯತೆ ಇದೆ. ಸೇನಾ ಹಿಂಪಡೆತದ ಬಳಿಕ ಸೇನಾಪಡೆಗಳು ಇಲ್ಲಿ ಗಸ್ತು ನಡೆಸಲಿವೆ. ಇದಾದ ಬಳಿಕ ಅರುಣಾಚಲ ಪ್ರದೇಶದ ಯಾಂಗ್ಸೆ, ಅಸಾಫಿಲಾ ಮತ್ತು ಸುಬನ್‌ಸಿರಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next